Evidence of Watsapp Message: ಸಾಕ್ಷ್ಯ ಅಧಿನಿಯಮದಡಿ ವಾಟ್ಸಾಪ್ ಸಂದೇಶಗಳಿಗೆ ಯಾವುದೇ ಸಾಕ್ಷೀಯ ಮೌಲ್ಯ ಇಲ್ಲ: ಸುಪ್ರೀಂ ಕೋರ್ಟ್
Evidence of Watsapp Message
ಸಾಕ್ಷ್ಯ ಅಧಿನಿಯಮದಡಿ ವಾಟ್ಸಾಪ್ ಸಂದೇಶಗಳಿಗೆ ಯಾವುದೇ ಸಾಕ್ಷೀಯ ಮೌಲ್ಯ ಇಲ್ಲ
ಸುಪ್ರೀಂ ಕೋರ್ಟ್
ವಾಟ್ಸ್ಆಪ್ ಸಂದೇಶಗಳು ಯಾವುದೇ ಅಧಿಕೃತ ಸಾಕ್ಷಿಯಲ್ಲ. ಭಾರತೀಯ ಸಾಕ್ಷ್ಯ ಅಧಿನಿಯಮದಡಿ ಅದಕ್ಕೆ ಯಾವುದೇ ಸಾಕ್ಷೀಯ ಮೌಲ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ವಾಟ್ಸಾಪ್ ಸುದ್ದಿಗಳಿಗೆ ಸಾಕ್ಷೀಯ ಮೌಲ್ಯ ಇದೆಯೇ..? ಈ ಅತ್ಯಾಧುನಿಕ ಯುಗದಲ್ಲಿ ವಾಟ್ಸಾಪ್ ಸುದ್ದಿಗಳನ್ನು ಯಾರು ಬೇಕಾದರೂ ಸೃಷ್ಟಿಸಬಹುದು ಇಲ್ಲವೇ ನಾಶ ಪಡಿಸಬಹುದು ಯಾ ತಮಗೆ ಬೇಕಾದಂತೆ ತಿರುಚಬಹುದು ಎಂದು ಸಿಜೆಐ ಎನ್‌ವಿ ರಮಣ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ, ಜಸ್ಟಿಸ್ ಎ.ಎಸ್. ಬೋಪಣ್ಣ ಮತ್ತು ಜ. ಹರಿಕೃಷ್ಣ ರಾಯ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿನಿಮಯವಾಗುವ ಸಂದೇಶಗಳಿಗೆ ನ್ಯಾಯಾಲಯದ ದೃಷ್ಟಿಯಿಂದ ಯಾವುದೇ ಸಾಕ್ಷೀಯ ಮೌಲ್ಯ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
'ಜನಪ್ರಿಯತೆಯು ವಿಶ್ವಾಸಾರ್ಹತೆಯ ಅಳತೆಯಲ್ಲ' ಎಂಬ ಗಾದೆಯನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಭಾರತೀಯ ಸಾಕ್ಷ್ಯ ಅಧಿನಿಯಮದ ಅಡಿಯಲ್ಲಿ ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ವಿನಿಮಯವಾಗುವ ಸಂದೇಶಗಳಿಗೆ ಯಾವುದೇ ಪುರಾವೆ ಮೌಲ್ಯವಿಲ್ಲ ಎಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದನ್ನೂ ಸೃಷ್ಟಿಸಬಹುದು ಮತ್ತು ಯಾವುದನ್ನೂ ತೆಗೆದು ಹಾಕಬಹುದು. ಮತ್ತು ಅವುಗಳಿಗೆ ಅಂಥಹ ಗಮನಾರ್ಹ ಮೌಲ್ಯ ನೀಡಲಾಗದು ಎಂದು ವಾಟ್ಸ್ ಆಪ್ ಸಂದೇಶಗಳ ಕುರಿತಾಗಿ ಹೇಳಿದೆ.
ಡಿಸೆಂಬರ್ 2016ರಲ್ಲಿ ಸೌತ್ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ (ಎಸ್‌ಡಿಎಂಸಿ) ಮತ್ತು ಎ2ಜಡ್ ಇನ್‌ಫ್ರಾ ಸರ್ವಿಸ್ ಮತ್ತು ಇತರರು ಪ್ರಕರಣದಲ್ಲಿ ವಿಚಾರಣೆ ಮುಂದಿಡಲಾದ ರಿಯಾಯಿತಿ ಒಪ್ಪಂದದ ಸಾಕ್ಷ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ವಿಷಯವನ್ನು ಉಲ್ಲೇಖಿಸಿ ಈ ತೀರ್ಪನ್ನು ಉದ್ದರಿಸಿದೆ.
ಆದರೆ, ಇದನ್ನು ಸಾಕ್ಷ್ಯ ಅಧಿನಿಯಮದ ಸೆಕ್ಷನ್ 65(ಬಿ) ಅಡಿ ಪ್ರಮಾಣಪತ್ರದೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಿದಾಗ ಮಾತ್ರ ಅದನ್ನು ಪ್ರಾಥಮಿಕ ಸಾಕ್ಷ್ಯ ಎಂದು ಪರಿಗಣಿಸಬಹುದು
Case Law-
A2Z Infraservices Ltd. Vs Quippo Infrastructure Ltd. (Now Known As Viom Infra Ventures Ltd.)
Supreme Court of India on July 14, 2021
in SLP(C) No. 8636/2021[1]