Quashing of FIR- CrPC ಸೆಕ್ಷನ್ 482 : ಎಫ್‌ಐಆರ್ ರದ್ದುಪಡಿಸುವ ವಿಶೇಷಾಧಿಕಾರದ ಕುರಿತು...
ದೂರು ಮತ್ತು ಪ್ರಥಮ ಮಾಹಿತಿ ವರದಿಯನ್ನು ರದ್ದುಪಡಿಸುವ ವಿಶೇಷಾಧಿಕಾರ ಇರುವುದು ರಾಜ್ಯಗಳ ಉಚ್ಚ ನ್ಯಾಯಾಲಯಕ್ಕೆ. ಸೆಕ್ಷನ್ 482ರ ಅಡಿಯಲ್ಲಿ ವಿಶೇಷ ಅಧಿಕಾರ ಚಲಾಯಿಸಿ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಪಡಿಸಬಹುದು.
ಕೆಲ ಪ್ರಮುಖ ಪ್ರಕರಣಗಳು:
Supreme Court:
ನಿಹಾರಿಕಾ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. Vs ಮಹಾರಾಷ್ಟ್ರ ರಾಜ್ಯ (13-04-2021)
ಭಜನ್ ಲಾಲ್ Vs ಹರ್ಯಾಣ ರಾಜ್ಯ 1992 AIR 604
ಆರ್.ಪಿ. ಕಪೂರ್ Vs ಪಂಜಾಬ್ ರಾಜ್ಯ 1960 AIR 862 , 1960 SCR (3) 311
Karnataka High Court
ವಿಜಯ ಕುಲಕರ್ಣಿ Vs ಕರ್ನಾಟಕ ರಾಜ್ಯ (10-01-2020)
Kerala High Court
ಉಮ್ಮನ್ ಚಾಂಡಿ Vs ಕೇರಳ ರಾಜ್ಯ (2016)
ಯಾವುದೇ ಒಂದು ಘಟನೆಯನ್ನು, ಅದು ನಡೆಯದೇ ಅದು ಘಟಿಸಿದೆ ಎಂಬುದಾಗಿ ಆರೋಪಿಸಿ ನೀಡಿದ ದೂರು ಮತ್ತು ಅದಕ್ಕೆ ಸಂಬಂಧಿಸಿ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು ಸೂಕ್ತ ಕಾರಣವನ್ನು ನೀಡಿ ಉಚ್ಚ ನ್ಯಾಯಾಲಯ ರದ್ದುಪಡಿಸಬಹುದು.
ಇದರಿಂದ ನ್ಯಾಯಾಲಯದ ಸಮಯ ವ್ಯರ್ಥ ಆಗುವುದನ್ನು ತಡೆಯಬಹುದು ಮತ್ತು ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿ ನ್ಯಾಯದಾನದಿಂದ ವಂಚಿತರಾಗಬಾರದು ಎಂಬುದು ಇದರ ಹಿಂದೆ ಇರುವ ತಾತ್ಪರ್ಯ.