HP High Court on Bail - ಆರೋಪಿಯ ತಪ್ಪೊಪ್ಪಿಗೆ ಅದೇ ಪ್ರಕರಣದ ಇನ್ನೊಬ್ಬ ಆರೋಪಿಗೆ ಜಾಮೀನು ನಿರಾಕರಿಸಲು ಸಕಾರಣವಲ್ಲ: ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪು (13-07-2021)
ಆರೋಪಿಯ ತಪ್ಪೊಪ್ಪಿಗೆ ಅದೇ ಪ್ರಕರಣದ ಇನ್ನೊಬ್ಬ ಆರೋಪಿಗೆ ಜಾಮೀನು ನಿರಾಕರಿಸಲು ಸಕಾರಣವಲ್ಲ: ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪು (13-07-2021)
Asha Devi Vs State of H.P.
'Confessional statement by the one of the accused is 'legally insufficient' to deny bail to the other accused.
Bail:- 'Any court granting bail with sureties should give a choice to the accused to either furnish surety bond or give a fixed deposit, with further option to switch over to another' (referred to Manish Lal Shrivatsava Vs State of Himachal Prades, CrMPM No. 1734 of 2020)
ಒಂದು ಪ್ರಕರಣದ ಒಬ್ಬ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಅದೇ ಪ್ರಕರಣದ ಇನ್ನೊಬ್ಬ ಆರೋಪಿಗೆ ಜಾಮೀನು ನಿರಾಕರಿಸಲು, ಯಾವುದೇ ಗುರುತರವಾದ ಸಾಕ್ಷ್ಯಗಳು ಅಥವಾ ಆರೋಪಗಳು ಇಲ್ಲದಿದ್ದ ಪಕ್ಷದಲ್ಲಿ, ಕಾನೂನಾತ್ಮಕವಾಗಿ ಸಕಾರಣವಲ್ಲ.
ಮಾದಕ ದ್ರವ್ಯ ನಿಷೇಧ ಕಾಯ್ದೆ-1985ರ ಕಲಂ 37ರಲ್ಲಿ ನಿರ್ಬಂಧಿತ ಪ್ರಮಾಣದ ಪೊಪ್ಪಿ ಹಸ್ಕ್(ಮಾದಕ ದ್ರವ್ಯ)ದೊಂದಿಗೆ ಬಂಧಿತರಾಗಿರುವ ಆರೋಪಿಯು, ತನಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲದಿರುವುದನ್ನು ಮುಂದಿಟ್ಟುಕೊಂಡು ಜಾಮೀನು ಕೋರಿ ಅರ್ಜಿ ಸಲ್ಲಿಸಿರುತ್ತಾನೆ.
ಈ ಬಗ್ಗೆ ಅಭಿಯೋಜನೆಯೂ ಯಾವುದೇ ತಕರಾರು ಸಲ್ಲಿಸಿರುವುದಿಲ್ಲ.
ತನಿಖೆ ಮೇಲೆ ಪ್ರಭಾವ ಬೀರಬಹುದು, ಸಾಕ್ಷ್ಯ ನಾಶ ಮಾಡಬಹುದು, ಸಾಕ್ಷಿಗಳನ್ನು ಬೆದರಿಸಬಹುದು ಎಂಬ ಕಾರಣಕ್ಕೆ ಕಠಿಣ ಷರತ್ತುಗಳನ್ನು ವಿಧಿಸಬೇಕು ಎಂದು ಅಭಿಯೋಜಕರು ವಾದ ಮಂಡಿಸಿದರು.
ಈ ಬಗ್ಗೆ ತೀರ್ಪು ನೀಡಿದ ಹಿಮಾಚಲ ಪ್ರದೇಶ ಹೈಕೋರ್ಟ್, ನಿರಖು ಠೇವಣಿ, ವೈಯಕ್ತಿಕ ಬಾಂಡ್ ಮೊದಲಾದ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿರುತ್ತದೆ.