Jail to get Bail order directly from Court- ಜಾಮೀನು ಆದೇಶ ಜೈಲಿಗೆ ರವಾನೆ: ಹೊಸ ವ್ಯವಸ್ಥೆಗೆ ಮು.ನ್ಯಾ. ಎನ್.ವಿ. ರಮಣ ಇಂಗಿತ
ಜಾಮೀನು ಆದೇಶ ಜೈಲಿಗೆ ರವಾನೆ: ಹೊಸ ವ್ಯವಸ್ಥೆಗೆ ಮು.ನ್ಯಾ. ಎನ್.ವಿ. ರಮಣ ಇಂಗಿತ
ವಿಚಾರಣಾಧೀನ ಖೈದಿಗಳು ಜೈಲಿನಿಂದ ಬಿಡುಗಡೆ ಮಾಡಲು ಆದೇಶವಿದ್ದರೂ ಆರೋಪಿಗಳ ವಿಳಂಬ ಆಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಆರೋಪಿಗಳ ಬಿಡುಗಡೆಗಾಗಿ ಭದ್ರತಾ ಶೂರಿಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಇದನ್ನು ಪರಿಗಣಿಸಿ ನ್ಯಾಯಾಲಯ ಬಿಡುಗಡೆಯ ಆದೇಶ ನೀಡುತ್ತದೆ. ಆದರೆ, ಜೈಲಿನ ಅಧಿಕಾರಿಗಳ ಮುಂದೆ ಸಂಬಂಧಿಕರು ಆರೋಪಿಗಳ ಬಿಡುಗಡೆಗೆ ಕಾಯಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲೂ ಜೈಲು ಅಧಿಕಾರಿಗಳು ಬಿಡುಗಡೆಯ ಆದೇಶಕ್ಕೆ ಪಾರಿವಾಳಗಳನ್ನು ಅವಲಂಬಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು, ನೇರವಾಗಿ ಆದೇಶದ ಪ್ರತಿಯನ್ನು ಜೈಲಿಗೆ ರವಾನಿಸುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲು ಚಿಂತನೆ ಮಾಡಲಾಗುತ್ತದೆ. ಜಾಮೀನು ದೊರೆತ ತಕ್ಷಣ ಸಂಬಂಧಪಟ್ಟವರು ಜೈಲಿನಿಂದ ಬಿಡುಗಡೆಯಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ ನ್ಯಾಯಮೂರ್ತಿ ರಮಣ, ಎಲ್ಲ ಜೈಲುಗಳಲ್ಲಿ ಆಧುನಿಕ ಸೌಲಭ್ಯ ಅಳವಡಿಸಲು ಕೋರ್ಟ್‌ಗಳು ಸೂಚನೆ ನೀಡಬೇಕು. ಇದಕ್ಕೆ ಎಲ್ಲ ವ್ಯವಸ್ಥೆಯನ್ನು ನಾವು ಮಾಡಲಿದ್ದೇವೆ ಎಂದು ಹೇಳಿದರು.
ನ್ಯಾಯಾಲಯಗಳಿಂದ ಜೈಲು ಅಧಿಕಾರಿಗಳಿಗೆ ನೇರವಾಗಿ ಬಿಡುಗಡೆ ಆದೇಶವನ್ನು ಇಮೇಲ್ ಮೂಲಕ ಕಳಿಸಲಾಗುವುದು. ಇದರಿಂದ ಜೈಲಿನಲ್ಲಿ ಬಿಡುಗಡೆ ಪ್ರಕ್ರಿಯೆ ತಕ್ಷಣವೇ ಆಗಬೇಕು ಎಂದು ಅವರು ಸೂಚನೆ ನೀಡಿದರು.