Cr PC - ಅಗತ್ಯ ಮಾಹಿತಿ ಇಲ್ಲದ ಎಫ್‌ಐಆರ್ ರದ್ದುಗೊಳಿಸಲು ಅರ್ಹ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ಅಗತ್ಯ ಮಾಹಿತಿ ಇಲ್ಲದ ಎಫ್‌ಐಆರ್ ರದ್ದುಗೊಳಿಸಲು ಅರ್ಹ
ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ಅಗತ್ಯ ಮಾಹಿತಿ ಇಲ್ಲದ ಎಫ್‌ಐಆರ್ ರದ್ದುಗೊಳಿಸಲು ಅರ್ಹ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು.
ದೂರು, ಎಫ್‌ಐಆರ್‌ಗೆ ಸಂಬಂಧಿಸಿದಂತೆ ಉಮ್ಮನ್ ಚಾಂಡಿ ಪ್ರಕರಣ ಅತಿ ಮಹತ್ವದ್ದು.
ವಾಸ್ತವಾಂಶಗಳು ಇಲ್ಲದ, ಅವಸರದಲ್ಲಿ ದಾಖಲಿಸಲಾದ ದೂರುಗಳು ಮತ್ತು ಗಡಿಬಿಡಿಯಲ್ಲಿ ಮಾಡಿದ ಪ್ರಥಮ ಮಾಹಿತಿ ವರದಿ(ಎಫ್ಐಆರ್)ಗಳನ್ನು ಹೈಕೋರ್ಟ್ ರದ್ದುಗೊಳಿಸುವ ಕುರಿತಂತೆ ಇದು ಮಹತ್ವದ ತೀರ್ಪು ಎಂದು ಪರಿಗಣಿಸಲಾಗಿದೆ.
2016ರಲ್ಲಿ ಸೋಲಾರ್ ಪ್ರಕರಣದಲ್ಲಿ ಆರೋಪಿ ಸರಿತಾ ಎಸ್. ನಾಯರ್ ನೀಡಿದ ಹೇಳಿಕೆಗಳ ಆಧಾರದಲ್ಲಿ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಮಾಜಿ ಸಚಿವ ಆರ್ಯಡನ್ ಮುಹಮ್ಮದ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಈ ಬಗ್ಗೆ ತ್ರಿಶೂರ್ ವಿಜಿಲೆನ್ಸ್ ಕೋರ್ಟ್ ಆದೇಶ ನೀಡಿತ್ತು.
ಈ ಆದೇಶವನ್ನು ಕೇರಳ ಹೈಕೋರ್ಟ್ ರದ್ದು ಮಾಡಿ ಮಹತ್ವದ ತೀರ್ಪು ನೀಡಿತು. ದೂರು ದೃಢವಾಗುವಂಥದ್ದಲ್ಲ. ಗಡಿಬಿಡಿಯಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ಅದನ್ನು ರದ್ದುಗೊಳಿಸುವಂತೆ ಜಸ್ಟಿಸ್ ಕಮಾಲ್ ಪಾಶಾ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಹೆಚ್ಚಿನ ವಿವರಗಳಿಗೆ ಈ ಸುದ್ದಿ ಲಿಂಕ್ ಬಳಸಿ: