Constitution is Strong- ದೇಶದ ಪ್ರಜೆಗಳ ನಾಗರಿಕ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಕಟಿಬದ್ಧ: ಜಸ್ಟಿಸ್ ರಮಣ
ದೇಶದ ಪ್ರಜೆಗಳ ನಾಗರಿಕ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಕಟಿಬದ್ಧ: ಜಸ್ಟಿಸ್ ರಮಣ
ದೇಶದ ಪ್ರಜೆಗಳ ನಾಗರಿಕ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಕಟಿಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎನ್.ವಿ. ರಮಣ ಪುನರುಚ್ಚರಿಸಿದ್ದಾರೆ.
ಭಾರತದ ಸಂವಿಧಾನ ಅಚಲವಾಗಿದೆ. ಬಲಿಷ್ಟ ಬಂಡೆಯಷ್ಟು ಸದೃಢವಾಗಿದೆ. ಇದನ್ನು ಯಾರೂ ಅಲುಗಾಡಿಸಲು ಆಗದು. ಸಂವಿಧಾನಕ್ಕೆ ಅಪಾಯವಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲವೂ ಸರಿಯಿಲ್ಲ ಎಂದು ಜನರಿಗೆ ಅರಿವಿಗೆ ಬಂದರೆ ಜನರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಸುಪ್ರೀಂ ಕೋರ್ಟ್ ಸದಾ ಜನರ ಜೊತೆ ಸಂವಿಧಾನದ ರಕ್ಷಣೆಗೆ ನಿಂತಿರುತ್ತದೆ ಎಂಬುದನ್ನು ಜನರೂ ಅರಿತುಕೊಂಡಿದ್ದಾರೆ ಎಂದು ಹೇಳಿದ್ದಾರೆ.
"ಯಾತೋ ಧರ್ಮಃ ಸ್ಥತೋ ಜಯ" ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ ಎಂಬ ಧ್ಯೇಯವಾಕ್ಯವನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಅಳವಡಿಸಿಕೊಂಡಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಪಾಲಿಸಿಕೊಂಡಿದೆ ಎಂದು ಅವರು ಹೇಳಿದರು.
ಇಂಡಿಯಾ ಸಿಂಗಾಪುರ ಮಧ್ಯಸ್ಥಿಕೆ ಶೃಂಗಸಭೆ-2021ರ ಜಾಗತಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.