CJ NV Ramana on New laws- ಶಾಸಕಾಂಗ ರೂಪಿಸುತ್ತಿರುವ ಕಾನೂನುಗಳು ಅಪಕ್ವ: ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
ಶಾಸಕಾಂಗ ರೂಪಿಸುತ್ತಿರುವ ಕಾನೂನುಗಳು ಅಪಕ್ವ: ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುವ ಸಂಸತ್ತು ರೂಪಿಸುವ ಕಾನೂನುಗಳು ಅಸ್ಪಷ್ಟವಾಗಿದ್ದು, ಗಂಭೀರವಾದ ಅಧ್ಯಯನದ ಬಳಿಕ ಕಾನೂನುಗಳನ್ನು ರೂಪಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕಾನೂನುಗಳನ್ನು ಗಂಭೀರವಾಗಿ ಚರ್ಚಿಸಲಾಗುತ್ತಿತ್ತು. ಮತ್ತು ಆಳವಾದ ಅಧ್ಯಯನ ನಡೆಸಲಾಗುತ್ತಿತ್ತು. ಆದರೆ, ಈಗ ಅದರ ಕೊರತೆ ಎದ್ದು ಕಾಣುತ್ತಿದೆ ಎಂದು ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲರ ಸಂಘ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸದನದಲ್ಲಿ ರೂಪಿಸಲಾಗುತ್ತಿರುವ ಕಾನೂನುಗಳು ಯಾವ ಉದ್ದೇಶಕ್ಕೆ ಇವೆ ಎಂಬುದು ನಮಗೆ ತಿಳಿಯುತ್ತಿಲ್ಲ. ಇದು ಬಹಳಷ್ಟು ವ್ಯಾಜ್ಯ, ಅನಾನುಕೂಲತೆ, ಸರ್ಕಾರಕ್ಕೆ ನಷ್ಟ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಸೃಷ್ಟಿಸುತ್ತಿದೆ ಎಂದು ರಮಣ ಹೇಳಿದರು.
ಉತ್ತಮ ಅನುಭವಿ ವಕೀಲರು ಕಾನೂನು ರಚನೆಗೆ ಕೊಡುಗೆ ನೀಡಲು ಮುಂದೆ ಬರದೆ ಇರುವುದು ಇದಕ್ಕೆ ಕಾರಣ ಎಂದ ಅವರು, ಬುದ್ಧಿಜೀವಿಗಳು ಮತ್ತು ವಕೀಲರ ಅನುಪಸ್ಥಿತಿಯಿಂದ ಇಂತಹ ಪ್ರಕ್ರಿಯೆ ಸಂಭವಿಸುತ್ತಿವೆ ಎಂದು ಹೇಳಿದರು.