Consumer Protection Act- ಪ್ರತಿವಾದ ಸಲ್ಲಿಸಲು 45 ದಿನಕ್ಕಿಂತ ಹೆಚ್ಚಿನ ಅವಧಿ ನೀಡಲು ಜಿಲ್ಲಾ ಆಯೋಗಕ್ಕೆ ಅಧಿಕಾರ ಇಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Consumer Case- ಪ್ರತಿವಾದ ಸಲ್ಲಿಸಲು 45 ದಿನಕ್ಕಿಂತ ಹೆಚ್ಚಿನ ಅವಧಿ ನೀಡಲು ಜಿಲ್ಲಾ ಆಯೋಗಕ್ಕೆ ಅಧಿಕಾರ ಇಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಪ್ರಕರಣಗಳಲ್ಲಿ ಯಾವುದೇ ಪ್ರತಿವಾದಿ/ ಎದುರುದಾರರು ತಮ್ಮ ಪ್ರತಿವಾದವನ್ನು 30+15 ದಿನಗಳೊಳಗೆ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದರ ಹೊರತಾಗಿ ಈ ಸಮಯವನ್ನು ಮತ್ತಷ್ಟು ವಿಸ್ತರಿಸುವ ಅಧಿಕಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿವಹಾರ ಆಯೋಗಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
New India Assurance Co Ltd Vs Hilli Multipurpose Cold Storage (dated 4-03-2020)
ನ್ಯೂ ಇಂಡಿಯಾ ಅಶ್ಶೂರೆನ್ಸ್ Vs ಹಿಲ್ಲಿ ಮಲ್ಟಿಪರ್ಪಸ್ ಕೋಲ್ಡ್ ಸ್ಟೋರೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಅರುಣಭ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ.ಆರ್. ಶಾ, ಹಾಗೂ ರವೀಂದ್ರ ಭಟ್ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರತಿವಾದಿಯು ಕೋರ್ಟ್ ನೋಟೀಸನ್ನು ಪಡೆದ ದಿನದಿಂದ ದಿನದ ಗಣತಿಯು ಆರಂಭವಾಗುತ್ತದೆ. ಒಂದು ವೇಳೆ, ನೋಟೀಸ್ ಜೊತೆ ದೂರಿನ ಪ್ರತಿ ಸಿಗಲಿಲ್ಲ ಎಂಬ ಆಕ್ಷೇಪವನ್ನು ಪ್ರತಿವಾದಿಯು ಮೊದಲ ದಿನದಲ್ಲೇ ಅರಿಕೆ ಮಾಡಬೇಕು.
ಆ ಬಳಿಕ ಇಂತಹ ವಾದಕ್ಕೆ ಅವಕಾಶ ಇರುವುದಿಲ್ಲ. ಒಂದು ವೇಳೆ, ಇಂತಹ ವಾದಕ್ಕೆ ಅವಕಾಶ ಕೊಟ್ಟರೆ, ಕ್ಷಿಪ್ರ ವಿಚಾರಣೆ ಮತ್ತು ನ್ಯಾಯದಾನದ ಉದ್ದೇಶ ವಿಫಲವಾದಂತಾಗುತ್ತದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
Supreme Court Judgement Link:
ನ್ಯೂ ಇಂಡಿಯಾ ಅಶ್ಶೂರೆನ್ಸ್ Vs ಹಿಲ್ಲಿ ಮಲ್ಟಿಪರ್ಪಸ್ ಕೋಲ್ಡ್ ಸ್ಟೋರೇಜ್ ಪ್ರಕರಣ