-->
How to pay Court Fee in Electronic Mode?| ನ್ಯಾಯಾಲಯ ಶುಲ್ಕ (ಕೋರ್ಟ್ ಫೀ) ಸಂಪೂರ್ಣ ಮರುಪಾವತಿ- 2020ರ ತಿದ್ದುಪಡಿ ಏನು ಹೇಳುತ್ತದೆ?

How to pay Court Fee in Electronic Mode?| ನ್ಯಾಯಾಲಯ ಶುಲ್ಕ (ಕೋರ್ಟ್ ಫೀ) ಸಂಪೂರ್ಣ ಮರುಪಾವತಿ- 2020ರ ತಿದ್ದುಪಡಿ ಏನು ಹೇಳುತ್ತದೆ?

ನ್ಯಾಯಾಲಯ ಶುಲ್ಕ (ಕೋರ್ಟ್ ಫೀ) ಸಂಪೂರ್ಣ ಮರುಪಾವತಿ- 2020ರ ತಿದ್ದುಪಡಿ ಏನು ಹೇಳುತ್ತದೆ? 



2020ರ ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ಆಧ್ಯಾದೇಶ 2020 (Karnataka Court fees and suits valuation -amendment- ordinance 2020) ಜುಲೈ 31, 2020ರಂದು ರಾಜ್ಯಪಾಲರ ಅಂಕಿತದೊಂದಿಗೆ ಜಾರಿಗೆ ಬಂದಿದೆ.



ಇದರ ಮುಖ್ಯ ಉದ್ದೇಶ ಏನೆಂದರೆ,

1) ರಾಜಿಯಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ವಾದಿಗೆ ಸಂಪೂರ್ಣ ಮರುಪಾವತಿ ಮಾಡುವುದು



2) ನ್ಯಾಯಾಲಯದ ಶುಲ್ಕ ಪಾವತಿ ಮತ್ತುಮರು ಪಾವತಿಗೆ ವಿದ್ಯುನ್ಮಾನ ಪಾವತಿ (Electronic Payment Mode) ಪದ್ದತಿಯನ್ನು ಅನುಸರಿಸುವುದು



ನೂತನ ತಿದ್ದುಪಡಿ ಕಾಯ್ದೆಯಲ್ಲಿ ಕಲಂ 66ಯನ್ನು ತಿದ್ದುಪಡಿ ಮಾಡಲಾಗಿದ್ದು, CPCಯ ಕಲಂ 89ರನ್ವಯ ವಿವರಿಸಿದಂತೆ ಮಧ್ಯಸ್ಥಿಕೆ, ರಾಜೀ ಸಂಧಾನ ಯಾ ಲೋಕ ಅದಾಲತ್ ಅಥವಾ ನ್ಯಾಯಾಲಯದ ಹೊರಗಡೆ ಇತ್ಯರ್ಥವಾದ ಪ್ರಕರಣದಲ್ಲಿ ಪಾವತಿಸಲಾದ ನ್ಯಾಯಾಲಯ ಶುಲ್ಕದ ಶೇ. 75ರಷ್ಟು ಮರಳಿ ಪಡೆಯಲು ಅವಕಾಶ ಇತ್ತು. ಈಗ ನೂತನ ತಿದ್ದುಪಡಿ ಬಳಿಕ ಸಂಪೂರ್ಣ ಅಥವಾ ಶೇ. 100ರಷ್ಟು ಮರಳಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.



ಸೆಕ್ಷನ್ 68 A ಮರುಸೇರ್ಪಡೆ: ಕೋರ್ಟ್ ಫೀ ಮರುಪಾವತಿಗೆ ಆದೇಶವಾದಲ್ಲಿ ವಿದ್ಯುನ್ಮಾನ ಪಾವತಿ ಮೂಲಕ ಹಣ ಮರು ಸಂದಾಯವಾಗಲಿದೆ.


ಸೆಕ್ಷನ್ 71: ನ್ಯಾಯಾಲಯ ಶುಲ್ಕ ಸಂಗ್ರಹಣೆ:

ಈ ಹಿಂದೆ ಎರಡು ವಿಧಾನ ಅನುಸರಿಸಲಾಗುತ್ತಿತ್ತು. ಮೊದಲನೇ ವಿಧಾನದಲ್ಲಿ, ಪಾವತಿ ಮೊತ್ತ ರೂ. 500ಕ್ಕೆ ಕಡಿಮೆ ಇದ್ದರೆ ಕೋರ್ಟ್ ಕಚೇರಿಯಲ್ಲಿ ಪಾವತಿ. ಎರಡನೇ ವಿಧಾನದಲ್ಲಿ ರೂ. 500 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸರ್ಕಾರಿ ಖಜಾನೆ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡುವ ಪದ್ಧತಿ ಇತ್ತು.



ತಿದ್ದುಪಡಿ ಬಳಿಕ: ಈ ಕಲಂಗೆ ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಮೊತ್ತದ ನ್ಯಾಯಾಲಯ ಶುಲ್ಕವನ್ನು ವಿದ್ಯುನ್ಮಾನ ಪದ್ಧತಿ ಮೂಲಕವೇ ಪಾವತಿ ಕಡ್ಡಾಯ. (K2 ಚಲನ್ ಮೂಲಕ)


ಈ ಬಗ್ಗೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗಿದೆ. K2 ಚಲನ್ ಪಾವತಿ ಮಾಡುವ ವಿಧಾನ ಹೀಗಿದೆ- (Procedure of Challan generation and E Payment)


https://k2.karnataka.gov.in/K2/

ಈ ಮೇಲಿನ ಲಿಂಕ್ ಬಳಸಿ. ಪಾವತಿದಾರರ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ಮತ್ತು ವಿಳಾಸವನ್ನು ಸೂಕ್ತ ಜಾಗದಲ್ಲಿ ತುಂಬಿಸಿ.


Details; ಕೆಟಗರಿ - Government ಎಂದು ತುಂಬಿ. ನಿಮ್ಮ ಜಿಲ್ಲೆಯನ್ನು ಕ್ಲಿಕ್ ಮಾಡಿ. 


Department: High Court of Karnataka subordinate Judiciary


DDO Code: Court Fee


Head of Account: 0070-01-501-0-01-000


Ads on article

Advertise in articles 1

advertising articles 2

Advertise under the article