-->
Dist Judge appointed | ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ: 12 ಅಭ್ಯರ್ಥಿಗಳ ನೇಮಕಾತಿ

Dist Judge appointed | ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ: 12 ಅಭ್ಯರ್ಥಿಗಳ ನೇಮಕಾತಿ





ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ ಅಂತಿಮ ಸುತ್ತಿನ ಅರ್ಹತಾ ಪರೀಕ್ಷೆ ನಡೆದಿದ್ದು, 12 ಮಂದಿ ಅಭ್ಯರ್ಥಿಗಳನ್ನು ಜಿಲ್ಲಾ ನ್ಯಾಯಾಧೀಶರುಗಳನ್ನಾಗಿ  ನೇಮಕ ಮಾಡಲಾಗಿದೆ.


ಆಗಸ್ಟ್ 4ರಂದು ಈ ಬಗ್ಗೆ ಹೈಕೋರ್ಟ್‌ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ನ್ಯಾಯಾಂಗ ಸೇವೆ (ನೇಮಕಾತಿ) ನಿಯಮ 2004 ಮತ್ತು ತಿದ್ದುಪಡಿ ನಿಯಮ 2011, 2015 ಮತ್ತು 2016 ಪ್ರಕಾರ ಈ ನೇಮಕಾತಿ ಮಾಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಟಿ.ಜಿ. ಶಿವಶಂಕರೇಗೌಡ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.


ಅಭ್ಯರ್ಥಿಗಳನ್ನು ಅವರು ಪಡೆದ ಅಂಕಗಳ ಆಧಾರದಲ್ಲಿ ಕ್ರಮದಲ್ಲಿ ಪ್ರಕಟಿಸಲಾಗಿದೆ.

ಮೊದಲ ಎರಡು ಸ್ಥಾನಗಳು ದಕ್ಷಿಣ ಕನ್ನಡಕ್ಕೆ ಸೇರಿದ್ದು, ಇಬ್ಬರು ಮಹಿಳಾ ವಕೀಲರು ಯಶಸ್ವಿಯಾಗಿ ಈ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.





ಕಿನ್ನಿಗೋಳಿಯ ಮಮ್ತಾಜ್ ಮತ್ತು ಪುತ್ತೂರು ದೋಳದ ಜ್ಯೋತ್ಸ್ನಾ ಶಾಸ್ತ್ರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನ್ಯಾಯಪೀಠಕ್ಕೆ ಆಯ್ಕೆಯಾಗಿದ್ದಾರೆ.


ಪುತ್ತೂರು ವಕೀಲರ ಸಂಘದ ಸದಸ್ಯೆಯಾಗಿರುವ ಜ್ಯೋತ್ಸ್ನಾ ಶಾಸ್ತ್ರಿ, ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಿರಿಯ ಸಹೋದ್ಯೋಗಿ.



Jyothsna Dola Shashtri 


ಸುಳ್ಯ ಮರ್ಕಂಜ ದೋಳ ನಿವಾಸಿ ಶಂಕರನಾರಾಯಣ ಶಾಸ್ತ್ರಿ ಮತ್ತು ವಿಜಯಲಕ್ಷ್ಮೀ ಶಾಸ್ತ್ರೀ ದಂಪತಿ ಪುತ್ರಿಯಾಗಿರುವ ಜ್ಯೋತ್ಸ್ನಾ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು.



Mamtaz

ಇನ್ನು ಮಮ್ತಾಜ್ ಮಂಗಳೂರು ವಕೀಲರ ಸಂಘದ ಸದಸ್ಯೆಯಾಗಿದ್ದು, ಹಿರಿಯ ವಕೀಲ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಸರ್ಕಾರಿ ಅಭಿಯೋಜಕರಾಗಿ ಭಟ್ಕಳದಲ್ಲಿ ಸೇವೆ ಸಲ್ಲಿಸುತ್ತಿದ್ದರು.


ಎಂಟನೇ ಸ್ಥಾನದಲ್ಲಿರುವ ಮಹಿಳಾ ಕೋಟದಿಂದ ಆಯ್ಕೆಯಾಗಿದ್ದರೆ, 9 ಮತ್ತು 10 ಕ್ರಮಾಂಕದಲ್ಲಿ ಇರುವವರು ಸರ್ಕಾರಿ ಆದೇಶದ ಪ್ರಕಾರ ಮಾಜಿ ಸೈನಿಕರ ಕೋಟಾದಲ್ಲಿ ಆಯ್ಕೆ ಗಿಟ್ಟಿಸಿಕೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article