Karnataka High Court | ಕರ್ನಾಟಕ ಹೈಕೋರ್ಟ್‌ನ 6 ನ್ಯಾಯಮೂರ್ತಿಗಳು ಖಾಯಂ- ಕೊಲಿಜಿಯಂ ಶಿಫಾರಸು
ಕರ್ನಾಟಕ ಹೈಕೋರ್ಟ್‌ನ 6 ನ್ಯಾಯಮೂರ್ತಿಗಳು ಖಾಯಂ- ಕೊಲಿಜಿಯಂ ಶಿಫಾರಸು
ಬೆಂಗಳೂರು : ರಾಜ್ಯ ಹೈಕೋರ್ಟ್ ನಲ್ಲಿ ಈಗ ಸೇವೆ ಸಲ್ಲಿಸುತ್ತಿರುವ 6 ನ್ಯಾಯಮೂರ್ತಿಗಳನ್ನು ಖಾಯಂ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾ. ನೇರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ, ನ್ಯಾ. ಜ್ಯೋತಿ ಮೂಲಿಮನಿ, ನ್ಯಾ. ನಟರಾಜ್ ರಂಗಸ್ವಾಮಿ, ನ್ಯಾ. ಹೇಮಂತ ಚಂದನಗೌಡರ್, ನ್ಯಾ. ಪ್ರದೀಪ್ ಸಿಂಗ್ ಯೆರೂರ್, ನ್ಯಾ. ಮಹೇಶನ್ ನಾಗಪ್ರಸನ್ನ ಅವರಿಗೆ ಖಾಯಂ ನ್ಯಾಯಾಧೀಶರಾಗುವ ಭಾಗ್ಯ ಒದಗಿಬಂದಿದೆ.
ಈ ಆರು ನ್ಯಾಯಮೂರ್ತಿಗಳನ್ನು ಖಾಯಂಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿದೆ.
2019ರ ನವೆಂಬರ್ 11ರಂದು ಹಾಗೂ ನವೆಂಬರ್ 26ರಂದು ಇವರನ್ನು ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿತ್ತು.
ಆಗಸ್ಟ್ 17ರಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಕೊಲಿಜಿಯಂ 6 ನ್ಯಾಯಮೂರ್ತಿಗಳನ್ನು ಖಾಯಂ ನ್ಯಾಯಮೂರ್ತಿಗಳಾಗಿ ನೇಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.