-->
Labour Law Ktk HC Judgement- ಕೆಲಸಕ್ಕೆ ತೆರಳುವಾಗ ಮೃತಪಟ್ಟರೂ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು 2-08-2021

Labour Law Ktk HC Judgement- ಕೆಲಸಕ್ಕೆ ತೆರಳುವಾಗ ಮೃತಪಟ್ಟರೂ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು 2-08-2021

ಕೆಲಸಕ್ಕೆ ತೆರಳುವಾಗ ಮೃತಪಟ್ಟರೂ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಕಾರ್ಮಿಕರು ಕೆಲಸಕ್ಕೆ ತೆರಳುವ ವೇಳೆ ಮೃತಪಟ್ಟರೂ ಅದಕ್ಕೆ ಮಾಲೀಕರೇ ಬಾಧ್ಯಸ್ಥರಾಗಿದ್ದು, ಕಾರ್ಮಿಕರ ವಾರಿಸುದಾರರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಎನ್. ಎಲ್. ಪುಣ್ಯಮೂರ್ತಿ Vs ಮೀನಾಕ್ಷಮ್ಮ ಮತ್ತು ಇತರರು ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಲಾಗಿದೆ.


ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು 2-08-2021ರಂದು ಈ ಮಹತ್ವದ ತೀರ್ಪು ನೀಡಿದ್ದಾರೆ.


ಪ್ರಕರಣದ ಹಿನ್ನೆಲೆ


2006ರ ಜುಲೈ ತಿಂಗಳಲ್ಲಿ ಕಾಫಿ ತೋಟದ ಕೆಲಸಕ್ಕೆ ತೆರಳುವ ವೇಳೆ ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿ ಸ್ವಾಮಿಗೌಡ ಮೃತಪಟ್ಟಿದ್ದರು. ಅವರು ಕೊಳ್ಳಿಬೈಲು ಗ್ರಾಮದ ಪುಣ್ಯಮೂರ್ತಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ತೆರಳುವ ವೇಳೆ ಕಾಲು ಜಾರಿ ಮೃತಪಟ್ಟಿದ್ದರಿಂದ ಸಾವು ಸಂಭವಿಸಿತ್ತು.


2010ರಲ್ಲಿ ವಾದ ವಿವಾದ ಆಲಿಸಿದ ಕಾರ್ಮಿಕ ಆಯುಕ್ತರು ತೋಟದ ಮಾಲೀಕರು ಮತ್ತು ವಿಮಾ ಸಂಸ್ಥೆ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ತೋಟದ ಮಾಲಕಿ ಪುಣ್ಯಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಬಗ್ಗೆ ಮಹತ್ವದ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್, ಕಾರ್ಮಿಕರು ಕೆಲಸಕ್ಕೆಂದೇ ಮನೆಯಿಂದ ಹೊರಟಿದ್ದರು. ಹೀಗಾಗಿ ಅವರ ಸಾವು ಕೆಲಸದ ಅವಧಿಯಲ್ಲಿ ಸಂಭವಿಸಿಲ್ಲ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತು.


ಮಂಜು ಸರ್ಕಾರ Vs ಮೊಬೀಷ್ ಮಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ತೋಟದ ಮಾಲೀಕರು ಮತ್ತು ವಿಮಾ ಸಂಸ್ಥೆ ಪರಿಹಾರ ನೀಡಬೇಕು ಎಂದು ಹೇಳಿದೆ.


Click here for the link of HC Judgement dated 2-08-2021

ಎನ್. ಎಲ್. ಪುಣ್ಯಮೂರ್ತಿ Vs ಮೀನಾಕ್ಷಮ್ಮ ಮತ್ತು ಇತರರು ಪ್ರಕರಣದ ಮಹತ್ವದ ತೀರ್ಪು 

Ads on article

Advertise in articles 1

advertising articles 2

Advertise under the article