-->
MVC - ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಯ ಚಾಲನೆಯಿಂದ ಅಪಘಾತವಾದರೆ ವಾಹನದ ಮಾಲಕ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು

MVC - ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಯ ಚಾಲನೆಯಿಂದ ಅಪಘಾತವಾದರೆ ವಾಹನದ ಮಾಲಕ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು

 ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಯ ಚಾಲನೆಯಿಂದ ಅಪಘಾತವಾದರೆ ವಾಹನದ ಮಾಲಕ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು




ವಿಮೆ ಹೊಂದಿರುವ ವಾಹನವನ್ನು ಚಾಲನಾ ಪರವಾನಿಗೆ ಹೊಂದಿಲ್ಲದ ವ್ಯಕ್ತಿಯ ಚಾಲನೆಯಿಂದ ಅಪಘಾತ ಸಂಭವಿಸಿದರೆ, ವಿಮಾ ಸಂಸ್ಥೆ ಮೊದಲು ಸಂತ್ರಸ್ತರಿಗೆ ಪರಿಹಾರ ನೀಡಬೇಕು. ನಂತರ ಅಪಘಾತಕ್ಕೆ ಕಾರಣವಾದ ವಾಹನ ಮಾಲೀಕರಿಂದ ಆ ಪರಿಹಾರದ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಬಿ.ಎಸ್. ಸುಬ್ಬೇಗೌಡ ಇತರರು Vs ಪಿ.ಪಿ. ಪ್ರಮೋದ್ ಮತ್ತು ಇತರರು ಪ್ರಕರಣದಲ್ಲಿ ಹೈಕೋರ್ಟ್ ಜುಲೈ 9, 2021ರಂದು ಮೇಲಿನ ಮಹತ್ವದ ತೀರ್ಪು ನೀಡಿದೆ.


bs subbegowda vs PP Pramod 9 july 2021


ಈ ಮೇಲಿನ ಪ್ರಕರಣಗಳಲ್ಲಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.


ಪ್ರಕರಣದ ಹಿನ್ನೆಲೆ:

ಬಿ.ಎಸ್. ವಿಜಯ ಕುಮಾರ್ ಎಂಬವರು 2009ರಲ್ಲಿ ಟಾಟಾ ಸುಮೋದಲ್ಲಿ ಮೈಸೂರು ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಟಿಪ್ಪರ್ ಎದುರಿನಿಂದ ಬಂದ ಟಾಟಾ ಸುಮೋಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ವಿಜಯ ಕುಮಾರ್ ಸಹಿತ 9 ಮಂದಿ ಸಾವನ್ನಪ್ಪಿದ್ದರು.


ಪ್ರಕರಣಕ್ಕೆ ಸಂಬಂಧಿಸಿದ ಲಾರಿಯ ತಪ್ಪಿನಿಂದ ಅಪಘಾತ ನಡೆದಿದೆ ಎಂದು ತೀರ್ಮಾನಿಸಿ ಮೃತ ವಿಜಯ್ ಕುಮಾರ್ ಕುಟುಂಬಕ್ಕೆ ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶ ನೀಡಿತ್ತು. ಆದರೆ, ಪರಿಹಾರ ಹೆಚ್ಚಿಸಲು ಕೋರಿ ವಿಜಯ್ ಕುಮಾರ್ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿತ್ತು.


ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಟಿಪ್ಪರ್ ಮತ್ತು ಲಾರಿ ವಿಮಾ ಸೌಲಭ್ಯ ಹೊಂದಿದ್ದರೂ ಟಿಪ್ಪರ್ ಚಾಲಕನಲ್ಲಿ ಚಾಲನಾ ಪರವಾನಿಗೆ ಇಲ್ಲದ ಕಾರಣ ಅದರ ಮಾಲೀಕರೇ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ್ದು, ಪರಿಹಾರದ ಮೊತ್ತವನ್ನು 13 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಿತ್ತು.



Link of the Judgement: bs subbegowda vs PP Pramod 9 july 2021

Ads on article

Advertise in articles 1

advertising articles 2

Advertise under the article