-->
NI Act: ಸುಮೇತಿ ವಿಜ್ Vs ಪ್ಯಾರಾಮೌಂಟ್ ಟೆಕ್ ಫ್ಯಾಬ್ ಇಂಡಸ್ಟ್ರೀಸ್ (9-03-2021)

NI Act: ಸುಮೇತಿ ವಿಜ್ Vs ಪ್ಯಾರಾಮೌಂಟ್ ಟೆಕ್ ಫ್ಯಾಬ್ ಇಂಡಸ್ಟ್ರೀಸ್ (9-03-2021)

NI Act: ಸುಮೇತಿ ವಿಜ್ Vs ಪ್ಯಾರಾಮೌಂಟ್ ಟೆಕ್ ಫ್ಯಾಬ್ ಇಂಡಸ್ಟ್ರೀಸ್ (9-03-2021)




ಸಾಲದ ಪೂರ್ತಿ ಪಾವತಿ ಯಾ ಭಾಗಶಃ ಪಾವತಿಗೆ ನೀಡಲಾದ ಚೆಕ್‌.


ಚೆಕ್ ಹೊಂದಿರುವವರ ಪರವಾಗಿ ಪೂರ್ವಭಾವನೆ.


2010ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಒಂದು ವ್ಯವಹಾರದ ಬಾಕಿಗೆ ಸಂಬಂಧಿಸಿ ನೀಡಲಾದ ಎರಡು ಚೆಕ್‌ಗಳು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಕಾನೂನು ತಿಳುವಳಿಕೆ ನೋಟೀಸ್ ನೀಡಲಾಗಿ, ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.


ದೂರುದಾರರು ಮೂರು ಸಾಕ್ಷ್ಯದಾರರನ್ನು ನ್ಯಾಯಾಲಯದ ಮುಂದಿಟ್ಟರು. ದಾಖಲೆಗಳನ್ನು ಗುರುತಿಸಲಾಯಿತು. ಎದ್ರಿದಾರರು ಯಾವುದೇ ಡಿಫೆನ್ಸ್ ಸಾಕ್ಷ್ಯವನ್ನು ಹಾಜರುಪಡಿಸಿರಲಿಲ್ಲ. ವಾದ ವಿವಾದಗಳನ್ನು ಆಲಿಸಿದ ವಿಚಾರಣಾ ನ್ಯಾಯಾಲಯ ಆರೋಪಿ ಪರವಾಗಿ ತೀರ್ಪು ನೀಡಿತ್ತು.


ಚೆಕ್ ನೀಡಿಕೆಗೆ ಕಾರಣವಾಗಿದ್ದ ಸರಕುಗಳ ಪೂರೈಕೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ದೂರುದಾರರು ಸಫಲರಾಗಿಲ್ಲ. ಇದರಿಂದ Burden of Proof ಆರೋಪಿಗೆ ವರ್ಗಾವಣೆಯಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು.


ಆದರೆ, ಹೈಕೋರ್ಟ್ ಈ ತೀರ್ಪನ್ನು ಪಕ್ಕಕ್ಕಿಟ್ಟು ಪ್ರತಿವಾದಿ/ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಸೂಕ್ತ ಶಿಕ್ಷೆ/ಪರಿಹಾರವನ್ನು ಪ್ರಕಟಿಸಿತ್ತು.


ಇದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಮಾನ್ಯ ಸುಪ್ರೀಂ ಕೋರ್ಟ್, ಚೆಕ್ ನೀಡಿಕೆಗೆ ಬೇಕಾದ ಹೇರಳವಾದ ದಾಖಲೆಗಳು ಇದೆ. ಸರಕು ಪೂರೈಕೆ ಮಾಡಿದ ಬಿಲ್, ಇನ್‌ವಾಯ್ಸ್ ಗಳಿರುವ ಸಮರ್ಥನೆಯನ್ನು ಮಾಡಲಾಗಿತ್ತು ಎಂಬುದನ್ನು ಗಮನಿಸಿತು. 


ಚೆಕ್ ಹೊಂದಿರುವವರ ಪರವಾಗಿ ಪೂರ್ವಭಾವನೆ ಹೊಂದಿದ್ದು, ಇಲ್ಲಿ Legally enforceable debt or liability ಇದೆ ಎಂಬುದನ್ನು ಸ್ಪಷ್ಟವಾಗಿ ಪರಿಗಣಿಸಿತು. ಇದು ದೂರುದಾರರ ಪರವಾಗಿ ಪೂರ್ವಭಾವನೆಯನ್ನು ಬಲಪಡಿಸುತ್ತದೆ ಎಂದು ಹೇಳಿತು.


ಹಿಮಾಚಲ ಪ್ರದೇಶ ಹೈಕೋರ್ಟ್ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಆರೋಪಿಗೆ ನೀಡಿದ ಶಿಕ್ಷೆಯನ್ನು ದೃಢಪಡಿಸಿತು.


Reportable SC Judgement of The Negotiable Instruments Act, 1881

Supreme Court of India

Judgement by Hon'ble Ms Malhotra and Ajay Rastogi

in Criminal appeal No(s) 292 of 2021

Arising out of SLP (Crl) No.(s) 8498 of 2019



Ads on article

Advertise in articles 1

advertising articles 2

Advertise under the article