Delhi HC allows Foreigners Marriage- ವಿದೇಶಿ ವಧು-ವರನ ಮದುವೆ ನೋಂದಣಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್
Saturday, August 14, 2021
Delhi HC allows Foreigners Marriage- ವಿದೇಶಿ ವಧು-ವರನ ಮದುವೆ ನೋಂದಣಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್
ಅಫ್ಘಾನಿಸ್ತಾನ ಪ್ರಜೆ ವಧು ಮತ್ತು ಫ್ರಾನ್ಸ್ ಪ್ರಜೆ ವಧು ತಮ್ಮ ಮದುವೆಯ ನೋಂದಣಿಯನ್ನು ಭಾರತದಲ್ಲಿ ಮಾಡಲು ನ್ಯಾಯಾಲಯ ಹಸಿರು ನಿಶಾನೆ ನೀಡಿದೆ.
ದೆಹಲಿ ಹೈಕೋರ್ಟ್ ಈ ಕುರಿತ ಮಹತ್ವದ ತೀರ್ಪು ನೀಡಿದ್ದು, ದೆಹಲಿಯ ಡಿಫೆನ್ಸ್ ಕಾಲನಿಯ ಮಸೀದಿಯೊಂದರಲ್ಲಿ ಈ ಮದುವೆ ಶಾಸ್ತ್ರೋಕ್ತವಾಗಿ ಎಪ್ರಿಲ್ 7, 2021ರಂದು ನಡೆದಿತ್ತು.
ಭಾರತದ ಸಂವಿಧಾನದ ಆರ್ಟಿಕಲ್ 14ನ್ನು ಉಲ್ಲೇಖಿಸಿದ ನ್ಯಾಯಾಲಯ ವಿಶೇಷ ವಿವಾಹಗಳ ಕಾಯ್ದೆಯನ್ವಯ ಈ ಮದುವೆಯ ನೋಂದಣಿಗೆ ಅವಕಾಶ ನೀಡಿದೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನ, ಪಕ್ಷಕಾರರು ಮದುವೆ ನೋಂದಣಿ ಕುರಿತು ಸಕ್ಷಮ ಅಧಿಕಾರಿಗೆ ಮನವಿ ಮಾಡಿದ್ದರು.
ಆದರೆ, ಆಧಾರ್ ಸೇರಿದಂತೆ ಯಾವ ದಾಖಲೆಗಳೂ ಇಲ್ಲದ ಕಾರಣ ವಿವಾಹ ನೋಂದಣಿ ಮಾಡಲು ಸಾಧ್ಯವಿಲ್ಲ ಎಂದು ಸಕ್ಷಮ ಅಧಿಕಾರಿ ಮಾಹಿತಿ ನೀಡಿದ್ದಾರೆ.