Supreme Court of India dated 17-08-2021 | ಹೆಬ್ಬೆಟ್ಟು ಗುರುತು ಅನನ್ಯ, ಇದರ ನಕಲು ಅಸಾಧ್ಯ- ಮರಣ ಶಾಸನ ರದ್ದತಿ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು
Friday, August 27, 2021
Supreme Court of India dated 17-08-2021 | ಹೆಬ್ಬೆಟ್ಟು ಗುರುತು ಅನನ್ಯ, ಇದರ ನಕಲು ಅಸಾಧ್ಯ- ಮರಣ ಶಾಸನ ರದ್ದತಿ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು
Lachhmi Narain Singh Vs Sarjug Singh
Supreme Court of India dated 17-08-2021
ವಿಲ್ (ಮರಣ ಶಾಸನ) ರದ್ದತಿ ಪತ್ರದ ಮೇಲೆ ಹೆಬ್ಬೆಟ್ಟು ಗುರುತು. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದು.
ಪ್ರತಿಯೊಬ್ಬರ ಹೆಬ್ಬೆಟ್ಟಿನ ನಿಶಾನೆ ಅನನ್ಯವಾಗಿರುತ್ತದೆ, ಇದಕ್ಕೆ ಯಾವುದೇ ರೀತಿಯ ಹೋಲಿಕೆ ಇರಲಾರದು. ಹೆಬ್ಬೆಟ್ಟಿನ ನಕಲು ಮಾಡುವುದು ಅಸಾಧ್ಯ ಮತ್ತು ಅಸಂಭವ. ಆದುದರಿಂದ, ಸಹಿ ಹಾಕುವ ಬದಲು ಹೆಬ್ಬೆಟ್ಟಿನ ಸಹಿ/ಗುರುತು ಹಾಕುವ ವಿಚಾರದಲ್ಲಿ ಅನುಮಾನಿಸಲು ಬಾರದು.
ಒಬ್ಬ ಸಾಕ್ಷರ ವ್ಯಕ್ತಿ ಸಹಿ ಹಾಕುವ ಬದಲು ತನ್ನ ಹೆಬ್ಬೆಟ್ಟಿನ ಗುರುತು ಹಾಕಿದರು ಎಂಬ ಕಾರಣಕ್ಕೆ ಅದನ್ನು ಅಲ್ಲಗಳೆಯಲಾಗದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.