What is PODI? - ಜಮೀನನ ಪೋಡಿ ಎಂದರೇನು..? ಅದು ಇಲ್ಲದಿದ್ದರೆ ನೀವು ಜಮೀನಿನ ಮಾಲೀಕರೇ ಅಲ್ಲ..!
ಜಮೀನನ ಪೋಡಿ ಎಂದರೇನು..? ಅದು ಇಲ್ಲದಿದ್ದರೆ ನೀವು ಜಮೀನಿನ ಮಾಲೀಕರೇ ಅಲ್ಲ..!
ಪೋಡಿ ಹೇಗೆ ಮಾಡಿಸೋದು? ಪೋಡಿಯ ಉಪಯೋಗವೇನು? ಇಲ್ಲದೆ ಸಂಪೂರ್ಣ ಮಾಹಿತಿ..
ಪೋಡಿ ಅಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ..! ಒಂದೇ ಸರ್ವೇ ನಂಬರ್‌ನಲ್ಲಿ ಒಬ್ಬರಿಗಿಂತ ಹೆಚ್ಚು RTCದಾರರ ಹೆಸರು ಇದ್ದರೆ ಅದನ್ನು ಬಹುಮಾಲಿಕತ್ವದ RTC ಎನ್ನಲಾಗುತ್ತದೆ.
ಒಂದು ಸರ್ವೆ ನಂಬರಿನಲ್ಲಿ ಇಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಅಳಿಸಿ ಪ್ರತಿಯೊಬ್ಬರ ಪ್ರತ್ಯೇಕವಾಗಿ ದಾಖಲೆ ಮಾಡಿಸುವುದಕ್ಕೆ ಪೋಡಿ ಎನ್ನುತ್ತಾರೆ.
ಪೋಡಿಯಲ್ಲಿ ಒಟ್ಟು ನಾಲ್ಕು ವಿಧಗಳು.
1. ತತ್ಕಾಲ್ ಪೋಡಿ
2.ದರ್ಖಾಸ್ ಪೋಡಿ
3. ಅಲಿನೇಷನ್ ಪೋಡಿ
4. ಮ್ಯುಟೇಷನ್ ಪೋಡಿ
ಈ ಮೇಲಿನ ನಾಲ್ಕರಲ್ಲಿ ತತ್ಕಾಲ್ ಪೋಡಿ ಬಗ್ಗೆ ಪ್ರತಿಯೊಬ್ಬ ರೈತರು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು.
ತತ್ಕಾಲ್ ಪೋಡಿ ಏಕೆ ಮಾಡಿಸಿಕೊಳ್ಳಬೇಕು..? ಇಲ್ಲಿದೆ ಸಂಪೂರ್ಣ ಮಾಹಿತಿ...
ಪೋಡಿ ಏಕೆ ಮಾಡಿಸಬೇಕು?
ಒಂದು ಸರ್ವೆ ನಂಬರ್ ನಲ್ಲಿ ಹಲವು ಹಿಸ್ಸಾ ಸರ್ವೆ ನಂಬರುಗಳು ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಜಮೀನು ಕಾನೂನಿನ ಪ್ರಕಾರ ಪ್ರತ್ಯೇಕವಾಗಿ ವಿಭಾಗ ಮಾಡಿ ಹೊಸ ಹಿಸ್ಸಾ ಸಂಖ್ಯೆ ಅಥವಾ ತಾತ್ಕಾಲಿಕ ಪೋಡಿ ಸಂಖ್ಯೆ ನೀಡಲಾಗುತ್ತದೆ.
ಅದೇ ರೀತಿ, ಪೋಡಿ ಮಾಡಿರುವ ಜಮೀನಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಪ್ರತ್ಯೇಕ ಪಹಣಿ ಅಥವಾ "ಏಕ ಮಾಲಿಕತ್ವ"ದ ಪಹಣಿ ಮಾಡಲಾಗುತ್ತದೆ.
ಉದಾಹರಣೆ: ಯಾವುದೋ ಒಂದು ಸರ್ವೆ ನಂಬರ್ ನಲ್ಲಿ ಐದು ಹಿಸ್ಸಾಗಳಿವೆ ಎಂದುಕೊಳ್ಳೋಣ. ಅದಕ್ಕೆ ಪ್ರತ್ಯೇಕ ಪಹಣಿ ಇರುವುದಿಲ್ಲ. ಆ ಒಂದು ಪಹಣಿಯಲ್ಲಿ ಎಲ್ಲರ ಹೆಸರುಗಳೂ ಇರುತ್ತವೆ. ಈ ಸರ್ವೆ ನಂಬರಿನ ಹೆಸರುಗಳು ಪ್ರತ್ಯೇಕವಾಗಿ ಬರಬೇಕೆಂದರೆ 'ತಾತ್ಕಾಲಿಕ ಪೋಡಿ' ಮಾಡಿಸ ಬಹುದು.
'ತಾತ್ಕಾಲಿಕ ಪೋಡಿ'ಗೆ ಬೇಕಾಗುವ ದಾಖಲೆಗಳು;
'ತಾತ್ಕಾಲಿಕ ಪೋಡಿ' ಮಾಡಿಸುವ ಜಮೀನಿನ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ಬೇಕು. ಇನ್ನೂ ದಾಖಲೆಗಳು ಬೇಕಾಗ ಬಹುದು. ಅದಕ್ಕಾಗಿ ನಾಡ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಸಂಪರ್ಕಿಸಬಹುದು.
ಪಹಣಿ ಪ್ರತ್ಯೇಕ ಮಾಡಲು ನಾಡ ಕಚೇರಿಯಲ್ಲಿ ಒಂದು ಅರ್ಜಿ ಸಲ್ಲಿಸಬೇಕು. ತತ್ಕಾಲ್ ಪೋಡಿಯಲ್ಲಿ ಪಹಣಿದಾರರ ಹೆಸರು ಬದಲಾವಣೆಯಾಗಲ್ಲ. ಗಡಿ (ಹದ್ದುಬಸ್ತು) ನಿಗದಿ ಮಾಡಿ ಪ್ರತ್ಯೇಕ ಪಹಣಿ ಮಾಡಲಾಗುವುದು.
ಪೋಡಿ ಮಾಡುವುದರಿಂದ ಆಗುವ ಲಾಭವೇನು?
ಏಕ ಮಾಲಕತ್ವ ಇದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ ಸುಲಭವಾಗಿ ಲಭ್ಯವಾಗುತ್ತದೆ. ಅಲ್ಲದೆ, ಭೂಮಿ ಮಾಲೀಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅತಿಕ್ರಮಣ ಸಾಧ್ಯವಾಗದು... ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಇದರಿಂದ ಅನುಕೂಲವಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಪೋಡಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಪೋಡಿ ಮಾಡುವ ಮೂಲಕ ಒಂದು RTCಗೆ ಒಂದು ನಕ್ಷೆ ಒದಗಿಸಲಾಗುತ್ತದೆ. ಬಹು ಮಾಲೀಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ಹಿಡುವಳಿದಾರರಿಗೆ ಪ್ರತ್ಯೇಕ ಪಹಣಿ ನಕ್ಷೆ ದೊರೆಯುತ್ತದೆ.
'ದರ್ಖಾಸ್ ಪೋಡಿ'ಯನ್ನು ಸರ್ಕಾರದ ಜಮೀನು ಮತ್ತು ಅದರ ಗಡಿ ಭಾಗ ಗುರುತಿಸಲು ಬಳಸುತ್ತಾರೆ. ಉದಾ: ಗೋಮಾಳ ಭೂಮಿ ಅಥವಾ ಸರಕಾರದ ಅಧೀನ ಭೂಮಿ ಗುರುತಿಸಲು..
ಪೋಡಿ ಮಾಡದಿರಲು ಕಾರಣಗಳೇನು?
ಅವಿಭಕ್ತ ಕುಟುಂಬಗಳು ಪ್ರತ್ಯೇಕವಾದ ನಂತರ ಜಮೀನು 'ಖಾತಾ'ಗಳು ದಾಖಲೆಯಲ್ಲಿ 'ಜಂಟಿ'ಯಾಗಿರುತ್ತದೆ. ಹಕ್ಕುದಾರರ ನಡುವೆ ವ್ಯಾಜ್ಯಮತ್ತು ಸೂಕ್ತ ದಾಖಲೆಗಳ ಕೊರತೆ.. ಮೊದಲಾದ ಕಾರಣಗಳಿಂದ ಪ್ರತ್ಯೇಕ RTC ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಹೆಚ್ಚಿನವರು ಪ್ರತ್ಯೇಕ RTC ಮಾಡುವ ಗೋಜಿಗೆ ಹೋಗುವುದಿಲ್ಲ.
ಇದರಿಂದ ಹೆಚ್ಚಿನ ಸರ್ವೆ ನಂಬರುಗಳಲ್ಲಿ ಬಹುಮಾಲೀಕತ್ವವೇ ಉಳಿದು ಕೊಂಡಿರುತ್ತದೆ. ಕಾನೂನು ಪ್ರಕಾರ ಅನ್ಯರಿಗೆ ನೀಡುವುದಕ್ಕೆ ಅಥವಾ ಮಾರಾಟ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.
ಜೊತೆಗೆ, ವ್ಯಾಜ್ಯ ಮುಕ್ತ ಪಹಣಿ ಪಡೆಯುವುದಕ್ಕೆ ಅವಕಾಶವಿರುವುದಿಲ್ಲ. ಈ ಉದ್ಯೇಶದಿಂದ ಪ್ರತ್ಯೇಕ RTC ಮಾಡಿಕೊಳ್ಳುವುದು ಉಪಯುಕ್ತ.