Karnataka High Court- ರೈತರ ಕುಮ್ಕಿ ಭೂಮಿ ಅಕ್ರಮ ಪ್ರವೇಶ: ಗ್ರಾಮ ಪಂಚಾಯತ್ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ
ರೈತರ ಕುಮ್ಕಿ ಭೂಮಿ ಅಕ್ರಮ ಪ್ರವೇಶ: ಗ್ರಾಮ ಪಂಚಾಯತ್ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ
ರೈತರ ಕುಮ್ಕಿ ಭೂಮಿಯನ್ನು ಬಲತ್ಕಾರವಾಗಿ ಅಕ್ರಮ ಪ್ರವೇಶದಂತೆ ಗ್ರಾಮ ಪಂಚಾಯತ್ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ದಕ್ಷಿಣ ಕನ್ನಡ ಅಮ್ಮುಂಜೆಯ ಕೃಷಿ ಭೂಮಿಯ ರೈತರೊಬ್ಬರ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಅಮ್ಮುಂಜೆಯ ರೈತ ವೆರೊನಿಕಾ ಕಾರ್ಲೋ ಇವರ ಕುಮ್ಕಿ ಭೂಮಿಗೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಬಲತ್ಕಾರವಾಗಿ ಪ್ರವೇಶ ಮಾಡಿದ್ದರು.
ಇದನ್ನು ಪ್ರಶ್ನಿಸಿ ರೈತ ಮಹಿಳೆ ವೆರೋನಿಕಾ ಕಾರ್ಲೋ ನ್ಯಾಯಾಲಯದ ಮೆಟ್ಟಿಲೇರಿದ್ದರು.
ರೈತ ಸಂಘದ ನೇತೃತ್ವದಲ್ಲಿ ಈ ಬಗ್ಗೆ ಸ್ಥಳೀಯವಾಗಿ ಹೋರಾಟವನ್ನೂ ಮಾಡಿತ್ತು. ಈ ಬಗ್ಗೆ ಹೈಕೋರ್ಟ್ ನಲ್ಲಿ ವಕೀಲರಾದ ಧನಂಜಯ ಕುಮಾರ್ ದೊಡ್ಡಗುತ್ತು ರೈತರ ಪರ ವಾದ ಮಂಡಿಸಿದ್ದರು.
ವೆರೋನಿಕಾ ಪರ ವಕೀಲರ ವಾದ ಮಂಡಿಸಿದ ಹೈಕೋರ್ಟ್, ಪಂಚಾಯತ್ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ರೈತರ ಕುಮ್ಕಿ ಜಮೀನು ಪ್ರವೇಶ ಮಾಡದಂತೆ ತಡೆಯಾಜ್ಞೆ ನೀಡಿದೆ.
ಇದು ಅಮ್ಮುಂಜೆ ಪಂಚಾಯತ್ ವಿರುದ್ಧ ರೈತ ಸಂಘದ ಎರಡನೇ ಕೇಸ್ ಆಗಿದ್ದು, ಕಾನೂನು ಹೋರಾಟದಲ್ಲಿ ರೈತ ಸಂಘಕ್ಕೆ ಮಹತ್ವದ ಜಯ ಸಿಕ್ಕಂತಾಗಿದೆ.