How to get RTC (Record of Rights Tenenancy and Crop Inspection) online | ಆನ್ಲೈನ್ನಲ್ಲಿ ಪಹಣಿ ಪತ್ರ ಪಡೆಯುವ ವಿಧಾನ
RTC (Record of Rights Tenenancy and Crop Inspection) | ಆನ್ಲೈನ್ನಲ್ಲಿ ಪಹಣಿ ಪತ್ರ ಪಡೆಯುವ ವಿಧಾನ
ತಾಲ್ಲೂಕು ಕಚೇರಿ, ನಾಡ ಕಚೇರಿ ಹಾಗು ಗ್ರಾಮ ಪಂಚಾಯಿತಿಗಳಲ್ಲಿ ದೊರೆಯುತ್ತಿದ್ದ ಪಹಣಿಗಳು ಇನ್ನು ಮುಂದೆ ಆನ್ಲೈನ್ನಲ್ಲಿ ದೊರೆಯುವುದರಿಂದ ತಾಲ್ಲೂಕು ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು , ವಿದ್ಯುತ್ ಸಮಸ್ಯೆ, ಸರ್ವರ್ ಸಮಸ್ಯೆ, ಪ್ರಿಂಟರ್ ಸಮಸ್ಯೆ, ಪೇಪರ್ ಇಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಬಿದ್ದಿದೆ.
ಸರ್ಕಾರವು ಕೃಷಿ ಜಮೀನಿಗೆ ಸಂಭಂದಿಸಿದ ಭೂ ದಾಖಲೆ ಅಥವಾ ಪಹಣಿಯನ್ನು ಇನ್ನು ಮುಂದೆ ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ 10 Rs ಪಾವತಿಸುವ ಮೂಲಕ ಪಡೆಯಲು BMC (Bhoomi Monitoring Cell) ನೆರವಿನಿಂದ ತಂತ್ರಾಂಶ ಅಭಿವೃದ್ದಿಪಡಿಸಿದ್ದು, ಸರ್ಕಾರದ ಈ ಪ್ರಯತ್ನ ದೇಶದಲ್ಲೇ ಮೊದಲು. ಈ ಪಹಣಿ ಎಲ್ಲಾ ಭದ್ರತಾ ವಿಶೇಷತೆಗಳನ್ನು ಹೊಂದಿದೆ. ಈ ಪಹಣಿಯನ್ನು ಸರ್ಕಾರದ ಯೋಜನೆಗಳಿಗೂ ಬಳಸಬಹುದು.
URL : http://landrecords.karnataka.gov.in
LINK : iRTC
ವಿಧಾನ :
1) ಬ್ರೌಸರ್ ನಲ್ಲಿ http://landrecords.karnataka.gov.in open ಮಾಡಿ
2) ಅರ್ಜಿದಾರರ ಹೆಸರು ಮತ್ತು ಇತರೆ ಮಾಹಿತಿಯನ್ನು ನೋಂದಾಯಿಸುವ ಮೂಲಕ ಭೂಮಿ ಪೋರ್ಟಲ್ ನಲ್ಲಿ ಖಾತೆಯನ್ನು ತೆರೆದು, ನೋಂದಾಯಿತ ಅಥವಾ ಅತಿಥಿ ಬಳಕೆದಾರರಾಗಿ ಒಳ ಪ್ರವೇಶಿಸಿ
3) ನಿಮಗೆ ಬೇಕಾದ ಜಿಲ್ಲೆ , ತಾಲ್ಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೇ ನಂಬರ್ ಆಯ್ಕೆ ಮಾಡುವ ಮೂಲಕ ಪಹಣಿ ವೀಕ್ಷಿಸಿ ನಂತರ PAY and DOWNLOAD ಬಟನ್ ಒತ್ತುವ ಮೂಲಕ SBI Payment gatewayಗೆ ಪ್ರವೇಶಿಸಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಆಯ್ಕೆ ಮೂಲಕ 10 Rs ಪಾವತಿಸಿ ಸದರಿ ವರ್ಷದ ಪಹಣಿ ಪ್ರಿಂಟ್ ಪಡೆಯಬಹುದು.
4. ಪಹಣಿಯ ನೈಜತೆಯನ್ನು http://landrecords.karnataka.gov.in/service5/ ಅಂತರ್ಜಾಲದಲ್ಲಿ ಪಹಣಿ ಯಲ್ಲಿ ಮುದ್ರಿತವಾಗಿರುವ ಭೂಮಿ ಅನನ್ಯ ಸಂಖ್ಯೆಯನ್ನು ನಮೂದಿಸುವ ಮೂಲಕ ಪರೀಕ್ಷಿಸಿಕೊಳ್ಳಬಹುದು.
ಅಥವಾ ka bhoomi <ಭೂಮಿ ಅನನ್ಯ ಸಂಖ್ಯೆಯನ್ನು> 161 ನಂಬರ್ಗೆ SMS ಕಳುಹಿಸುವ ಮೂಲಕ ಪರೀಕ್ಷಿಸಬಹುದು.
ಲೇಖನ: ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಮಂಗಳೂರು ನ್ಯಾಯಾಲಯ ಸಂಕೀರ್ಣ