-->
SC on lifting the Limitation period- ಅಕ್ಟೋಬರ್ 1ರಿಂದ ಕಾಲಮಿತಿ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್ ಸೂಚನೆ

SC on lifting the Limitation period- ಅಕ್ಟೋಬರ್ 1ರಿಂದ ಕಾಲಮಿತಿ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್ ಸೂಚನೆ

SC on lifting the Limitation period- ಅಕ್ಟೋಬರ್ 1ರಿಂದ ಕಾಲಮಿತಿ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ಹಿನ್ನೆಲೆಯಲ್ಲಿ ನೀಡಲಾಗಿದ್ದ ಕಾಲಮಿತಿ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ಹಿಂದಕ್ಕೆ ಪಡೆಯುವ ಸೂಚನೆಯನ್ನು ನೀಡಿದೆ.

ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಮಾನಕ್ಕೆ ಬಂದಿದ್ದು, ಅಕ್ಟೋಬರ್ 1ರಿಂದ ಈ ವಿನಾಯಿತಿಯನ್ನು ಹಿಂದಕ್ಕೆ ಪಡೆಯಬಹುದು ಎನ್ನಲಾಗಿದೆ.

ಮುಖ್ಯ ನಾಯಮೂರ್ತಿ ಎನ್.ವಿ. ರಮಣ, ಜಸ್ಟಿಸ್ ಎಲ್. ನಾಗೇಶ್ವರ ರಾವ್ ಮತ್ತು ಜಸ್ಟಿಸ್ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ಈ ಮುನ್ಸೂಚನೆ ನೀಡಿದ್ದು, 90 ದಿನಗಳ ಹೆಚ್ಚುವರಿ ಅವಧಿಯನ್ನು ನೀಡುವ ಸಾಧ್ಯತೆ ಇದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ ನ್ಯಾಯಪೀಠ, ಕಾಲಮಿತಿ ಸ್ಥಗಿತವನ್ನು ಹಿಂದಕ್ಕೆ ಪಡೆಯಲು ಈ ಸಂದರ್ಭ ಸಕಾಲವಾಗಿದೆ. ಅಕ್ಟೋಬರ್ 1ರ ವರೆಗೆ ಕಾಲಮಿತಿ ವಿನಾಯಿತಿ ಇರುತ್ತದೆ ಎಂದು ಹೇಳಬಹುದು ಎಂದು ಹೇಳಿದೆ.

ಮಾರ್ಚ್‌ 23, 2020ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಮಾರ್ಚ್‌ 15, 2020ರಿಂದ ಈ ದಿನದ ವರೆಗೆ ಕಾಲಮಿತಿ ವಿನಾಯಿತಿಯನ್ನು ಘೋಷಣೆ ಮಾಡಿತ್ತು.

Ads on article

Advertise in articles 1

advertising articles 2

Advertise under the article