Computer education must-HC Circular - ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ: ಕರ್ನಾಟಕ ಹೈಕೋರ್ಟ್ ಮಹತ್ವದ ಸುತ್ತೋಲೆ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ: ಕರ್ನಾಟಕ ಹೈಕೋರ್ಟ್ ಮಹತ್ವದ ಸುತ್ತೋಲೆ
ಕರ್ನಾಟಕ ನಾಗರಿಕ ಸೇವಾ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಿಯಮಗಳು 2012 ರ ನಿಯಮ 1 (3)ರಲ್ಲಿ ಕಾಣಿಸಲಾದ ನೌಕರರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ನೌಕರರೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ದಿನಾಂಕ 22.3.2022ರೊಳಗೆ ಉತ್ತೀರ್ಣರಾಗಬೇಕೆಂದು ಕರ್ನಾಟಕ ಸರಕಾರ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆ ಸಂಖ್ಯೆ ಸಿಆಸುಇ 53 ಸೇವನಿ 2021 ದಿನಾಂಕ 19.8.2021
ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರು; ಬೇಲಿಫ್ ಮತ್ತು ಪ್ರೊಸೆಸ್ ಸರ್ವರ್ ರವರನ್ನು ಹೊರತುಪಡಿಸಿ ಉಳಿದ ಎಲ್ಲಾ ನೌಕರರು / ಅಧಿಕಾರಿಗಳು
ದಿನಾಂಕ 22.3.2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪೂರ್ಣಗೊಳಿಸಬೇಕೆಂದು ಸರಕಾರದ ಸದರಿ ಸುತ್ತೋಲೆಯ ಬೆಳಕಿನಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 11.10.2021ರಂದು ಸಂಖ್ಯೆ HCE 188/2021 ಪ್ರಕಾರ ಸುತ್ತೋಲೆಯನ್ನು ಹೊರಡಿಸಿದೆ.
ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಕಿಯೋನಿಕ್ಸ್ ಸಂಸ್ಥೆಯವರು ಏರ್ಪಡಿಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ನಿಗದಿಪಡಿಸಿದ ದಿನಾಂಕ 22.3.2022ರೊಳಗೆ ಉತ್ತೀರ್ಣರಾಗದ ನೌಕರರ ಪ್ರೊಬೇಷನರಿ ಅವಧಿ ಘೋಷಣೆ; ವಾರ್ಷಿಕ ವೇತನ ಬಡ್ತಿ ಮಂಜೂರಾತಿ ಹಾಗೂ ಮುಂದಿನ ಹುದ್ದೆಗೆ ಪದೋನ್ನತಿಯನ್ನು ತಡೆ ಹಿಡಿಯಲಾಗುವುದು.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಈಗಾಗಲೇ ಉತ್ತೀರ್ಣರಾದ ನೌಕರರು ಹಾಗೂ ಇನ್ನು ಮುಂದೆ ಸದರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ನೌಕರರು ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಸಕ್ಷಮ ಪ್ರಾಧಿಕಾರದವರು ನೀಡಿದ ಪ್ರಮಾಣಪತ್ರದ ಪ್ರತಿಯನ್ನು ಸೇವಾವಹಿಯಲ್ಲಿ ಸೂಕ್ತ ನಮೂದನೆಗಾಗಿ ಆಡಳಿತ ವಿಭಾಗಕ್ಕೆ ಸಲ್ಲಿಸಲು ಸದರಿ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.