Court Leave on Oct 19?- ಅ. 19ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ: ಸರ್ಕಾರ ಆದೇಶ, ನ್ಯಾಯಾಲಯ ಕಲಾಪಕ್ಕೂ ರಜೆ?
ಅ. 19ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ: ಸರ್ಕಾರ ಆದೇಶ, ನ್ಯಾಯಾಲಯ ಕಲಾಪಕ್ಕೂ ರಜೆ?
ಈದ್ ಮಿಲಾದ್ ಹಬ್ಬ ಆಚರಣೆಗೆ ಈ ಹಿಂದೆ ಅಕ್ಟೋಬರ್ 20ರಂದು ರಜೆ ಘೋಷಿಸಲಾಗಿತ್ತು. ಇದೀಗ, ಮೂನ್ ಕಮಿಟಿಯ ತೀರ್ಮಾನದಂತೆ ಅಕ್ಟೋಬರ್ 19ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ರಾಜ್ಯ ನ್ಯಾಯಾಲಯಗಳ ಕಲಾಪದಲ್ಲೂ ಆ ದಿನ ರಜೆ ಘೋಷಿಸುವ ಸಾಧ್ಯತೆ ಇದೆ. ಈ ಹಿಂದೆ, ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಮಂಗಳವಾರ ದಿನ ಕೋರ್ಟ್ ಕಲಾಪ ನಡೆಸುವ ಎಲ್ಲ ಸಾಧ್ಯತೆ ಇತ್ತು.
ಆದರೆ, ಇದೀಗ ರಾಜ್ಯದೆಲ್ಲೆಡೆ ಈದ್ ಮಿಲಾದ್ ನ್ನು ಮಂಗಳವಾರ ಆಚರಣೆ ಮಾಡುವ ಕಾರಣಕ್ಕೆ ಆ ದಿನವೇ ಕೋರ್ಟ್ ಕಲಾಪಕ್ಕೂ ರಜೆ ಘೋಷಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಹೈಕೋರ್ಟ್ ಸೋಮವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ಒಂದು ವೇಳೆ, ಮಂಗಳವಾರ ರಜೆ ಘೋಷಣೆಯಾದರೆ, ಆ ದಿನ ನಿಗದಿಯಾದ ಕೇಸುಗಳು ಗುರುವಾರಕ್ಕೆ ಮುಂದೂಡಲ್ಪಡುವುದು ಮತ್ತು ಆ ದಿನ ಮೊದಲು ಮಂಗಳವಾರದ ಕೇಸುಗಳನ್ನು ವಿಚಾರಣೆ ಮಾಡಲಾಗುವುದು.