Delay Evidence is acceptable, SC : ಪ್ರತ್ಯಕ್ಷ ಸಾಕ್ಷಿ ಹೇಳಿಕೆ ತಡವಾದರೂ ಅದು ಮಾನ್ಯ: ಸುಪ್ರೀಂ ಕೋರ್ಟ್
Saturday, October 16, 2021
ಪ್ರತ್ಯಕ್ಷ ಸಾಕ್ಷಿ ಹೇಳಿಕೆ ತಡವಾದರೂ ಅದು ಮಾನ್ಯ: ಸುಪ್ರೀಂ ಕೋರ್ಟ್
ಯಾವುದೇ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಿದರೂ ಅದನ್ನು ಮಾನ್ಯತೆ ಇದ್ದು, ತಡವಾಗಿದೆ ಎಂಬ ಕಾರಣಕ್ಕೆ ಅದನ್ನು ಅಮಾನ್ಯ ಮಾಡಲು ಆಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರತ್ಯಕ್ಷ ಸಾಕ್ಷಿಗಳು ಕೆಲವೊಮ್ಮೆ ಅಪರಾಧಿಗಳ ಬೆದರಿಕೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಅವರಿಗೆ ಭೀತಿ ಕಾಡುತ್ತಿರಬಹುದು. ಸಾಕ್ಷ್ಯ ನೀಡಲು ತಡವಾಗಿರಬಹುದು. ಹಾಗಾಗಿ, ತಡವಾಗಿ ಅವರ ಸಾಕ್ಷ್ಯ ದಾಖಲಿಸಿದಾಗ ಅದಕ್ಕೆ ಮಾನ್ಯತೆ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಆದರೆ, ತಡವಾಗಿ ಸಾಕ್ಷ್ಯ ನುಡಿಯಲು ಇದ್ದ ಕಾರಣಗಳೇನು ಎಂಬುದನ್ನು ಸಾಕ್ಷ್ಯ ನುಡಿಯುವಾಗ ಉಲ್ಲೇಖಿಸಬೇಕು ಮತ್ತು ನ್ಯಾಯಪೀಠಕ್ಕೆ ಆ ಸಂದರ್ಭವನ್ನು ಮನವರಿಕೆ ಮಾಡಿಕೊಡಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ತಿಳಿಸಿದೆ.