Eid Holiday- Notification by Karnataka High Court | ಈದ್ ಮಿಲಾದ್: ಹಿಂದಿನ ಸುತ್ತೋಲೆ ರದ್ದುಪಡಿಸಿ ಮಂಗಳವಾರ ರಜೆ ಘೋಷಿಸಿದ ಕರ್ನಾಟಕ ಹೈಕೋರ್ಟ್
ಈದ್ ಮಿಲಾದ್: ಹಿಂದಿನ ಸುತ್ತೋಲೆ ರದ್ದುಪಡಿಸಿ
ಮಂಗಳವಾರ ರಜೆ ಘೋಷಿಸಿದ ಕರ್ನಾಟಕ ಹೈಕೋರ್ಟ್
ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳು, ಹೈಕೋರ್ಟ್ ಪೀಠ ಸೇರಿದಂತೆ ಎಲ್ಲ ಕೋರ್ಟುಗಳಿಗೆ ಮಂಗಳವಾರ ರಜೆ ಘೋಷಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ಸಂಜೆ ಅಧಿಸೂಚನೆಯನ್ನು ಹೊರಡಿಸಿದೆ.
ಎರಡು ದಿನಗಳ ಹಿಂದಷ್ಟೇ ಹೊರಡಿಸಲಾದ ಸುತ್ತೋಲೆಯನ್ನು
ರದ್ದುಪಡಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿಗಳ ಆದೇಶದಂತೆ ಈ ಅಧಿಸೂಚನೆ
ಹೊರಡಿಸಲಾಗಿದೆ.
ಅಕ್ಟೋಬರ್ 18, 2021ರಂದು ಅಧಿಸೂಚನೆ ಹೊರಡಿಸಿರುವ
ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀ ಶಿವಶಂಕರ ಗೌಡ, ಈದ್ ಮಿಲಾದ್ ಪ್ರಯುಕ್ತ ಮಂಗಳವಾರ,
ಅಕ್ಟೋಬರ್ 19ರಂದು ರಜೆ ಘೋಷಿಸಿರುವುದಾಗಿ ತಿಳಿಸಿದ್ದಾರೆ.
17-10-2021ರಂದು ಕರ್ನಾಟಕ ರಾಜ್ಯ ಸರ್ಕಾರ
ಹೊರಡಿಸಿರುವ ಸುತ್ತೋಲೆಯನ್ನು ಉಲ್ಲೇಖಿಸಿರುವ ಹೈಕೋರ್ಟ್, ತನ್ನ ಹಿಂದಿನ ಸುತ್ತೋಲೆಯನ್ನು ಹಿಂದಕ್ಕೆ
ಪಡೆದುಕೊಂಡಿರುವುದಾಗಿ ಸ್ಪಷ್ಟಪಡಿಸಿದೆ. ಅಲ್ಲದೆ, ನಾಳೆ ನೀಡಲಾಗಿರುವ ರಜೆ ಸಾರ್ವತ್ರಿಕ ರಜೆ ಎಂದು
ಘೋಷಿಸಿಕೊಂಡಿದೆ.
ಮಂಗಳವಾರದಂದು ನ್ಯಾಯಾಲಯದ ಮುಂದೆ ವಿಚಾರಣೆಗೆ
ಬರಲಿರುವ ಪ್ರಕರಣಗಳು ಅಕ್ಟೋಬರ್ 21ಕ್ಕೆ ಮುಂದೂಡಲ್ಪಡುವುದು. ಆ ದಿನ, ಮೊದಲು ಮಂಗಳವಾರದ ಕೇಸುಗಳನ್ನು
ವಿಚಾರಣೆಗೆ ಎತ್ತಿಕೊಳ್ಳಲಾಗುವುದು.