-->
Former SC Judge on Sedition - "ಟೀಮ್ ಇಂಡಿಯಾ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸುವುದು ದೇಶದ್ರೋಹವಲ್ಲ"

Former SC Judge on Sedition - "ಟೀಮ್ ಇಂಡಿಯಾ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸುವುದು ದೇಶದ್ರೋಹವಲ್ಲ"

"ಟೀಮ್ ಇಂಡಿಯಾ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸುವುದು ದೇಶದ್ರೋಹವಲ್ಲ"


ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ ಹೇಳಿಕೆ





ಕ್ರಿಕೆಟ್ ರಣರಂಗದಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸುವುದು ದೇಶದ್ರೋಹವಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ ಹೇಳಿದ್ದಾರೆ.


ರಾಷ್ಟ್ರೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಇದು ಖಂಡಿತ ದೇಶದ್ರೋಹವಲ್ಲ. ಇದೊಂದು ದೇಶದ್ರೋಹದ ಪ್ರಕರಣ ಎಂದು ಆಲೋಚಿಸುವುದು ಮೂರ್ಖತನದ ಸಂಗತಿ ಎಂದು ಅವರು ಹೇಳಿದ್ದಾರೆ.


ಒಂದು ವಿಷಯವು ಕಾನೂನುಬದ್ಧವಾಗಿರಬಹುದು. ಆದರೆ, ಅದು ಕಾನೂನು ಬಾಹಿರ ಎಂದು ಹೇಳುವುದಕ್ಕಿಂತ ಭಿನ್ನವಾಗಿದೆ.... ಎಲ್ಲ ಕಾನೂನು ಕ್ರಮಗಳು ಅಗತ್ಯವಾಗಿ ಒಳ್ಳೆಯ ಮತ್ತು ನೈತಿಕ ಕ್ರಮಗಳಲ್ಲ. ಮತ್ತುಎಲ್ಲ ಅನೈತಿಕ ಅಥವಾ ಕೆಟ್ಟ ಕ್ರಮಗಳು ಅಗತ್ಯವಾಗಿ ಕಾನೂನುಬಾಹಿರ ಕ್ರಮಗಳಾಗಿ ಬದಲಾವುದಿಲ್ಲ. ಅದೃಷ್ಟವಶಾತ್, ನಾವು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುತ್ತೇವೆಯೋ ಹೊರತು ನೈತಿಕತೆಯ ನಿಯಮದಿಂದ ಅಲ್ಲ. ನೈತಿಕತೆ ಸಮಾಜಗಳಲ್ಲಿ ವಿಭಿನ್ನ ಧರ್ಮಗಳಲ್ಲಿ ಮತ್ತು ವಿಭಿನ್ನ ಸಮಯಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಿದೆ ಎಂಧು ಅವರು ಹೇಳಿದ್ದಾರೆ.


ಬಲವಂತ್ ಸಿಂಗ್ ಮತ್ತು ಇತರರು Vs ಪಂಜಾಬ್ ರಾಜ್ಯ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಈ ಪ್ರಕರಣದಲ್ಲಿ ಖಾಲಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಹಾಕಿರುವುದು ದೇಶದ್ರೋಹವಲ್ಲ ಎಂದು ಮಾನ್ಯ ಸುಪ್ರೀಂ ಕೋರ್ಟ್ ಹೇಳಿದೆ.

ಅದೇ ರೀತಿ, ಭಾರತ ಕ್ರಿಕೆಟ್ ತಂಡದ ವಿರುದ್ಧದ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆಗ್ರಾದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವೀಟ್ ನಮ್ಮ ನೆಲದ ಕಾನೂನಿಗೆ ವಿರುದ್ಧವಾಗಿದೆ ಎಂದುಅ ವರು ಅಭಿಪ್ರಾಯಪಟ್ಟರು.


Ads on article

Advertise in articles 1

advertising articles 2

Advertise under the article