-->
Govt Job for Advocate- ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಸಲ್ಲಿಸಲು 30/10/2021 ಕೊನೆ ದಿನ

Govt Job for Advocate- ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಸಲ್ಲಿಸಲು 30/10/2021 ಕೊನೆ ದಿನ

ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಸಲ್ಲಿಸಲು 30/10/2021 ಕೊನೆ ದಿನ






ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಐದು ವಕೀಲರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.



ಆಸಕ್ತ ವಕೀಲರು / ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ಅದರ ಪ್ರಕಾರ ಅರ್ಜಿಯಲ್ಲಿ ಸಲ್ಲಿಸಬಹುದು.



ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 30, 2021.



ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿವೆ.



ಸಂಸ್ಥೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ


ಹುದ್ದೆ: ವಕೀಲರು/ ಕಾನೂನು ಸಲಹೆಗಾರರು


ಶೈಕ್ಷಣಿಕ ಅರ್ಹತೆ: ಯಾವುದೇ ಅಂಗೀಕೃತ ಮಂಡಳಿ ಯಾ ವಿಶ್ವವಿದ್ಯಾನಿಲಯದಿಂದ 

ಎಲ್‌ಎಲ್‌ಬಿ ಆಥವಾ ತತ್ಸಮಾನ ಜೊತೆಗೆ ಕರ್ನಾಟಕ ವಕೀಲರ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು



ವೇತನ: ಹಿರಿಯ ವಕೀಲರಿಗೆ ರೂ. 50,000/- + 5000/- ಭತ್ಯೆ


ಕಿರಿಯ ವಕೀಲರಿಗೆ ರೂ. 40,000/- + 5000/- ಭತ್ಯೆ



ಆಯ್ಕೆ ಪ್ರಕ್ರಿಯೆ ಹೇಗೆ..?

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಹಿರಿಯ ವಕೀಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೌನ್ಸಿಲಿಂಗ್ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡುತ್ತದೆ.



ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ ಲಿಂಕ್‌ನಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಅಂತರ್ಜಾಲದಲ್ಲಿ ನೀಡಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಕ್ಟೋಬರ್ 30ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.



ವೆಬ್‌ಸೈಟ್ ಲಿಂಕ್: https://sslc.karnataka.gov.in/



ಅಧಿಸೂಚನೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://sslc.karnataka.gov.in/storage/pdf-files/Invitationofapplicationforappointmentofadvocateo%20contractbasis.pdf


Ads on article

Advertise in articles 1

advertising articles 2

Advertise under the article