No Court Holiday on Eid - ನಾಳೆ ಕೋರ್ಟಿಗಿಲ್ಲ ರಜೆ: ಕಲಾಪ ಎಂದಿನಂತೆ- ಹೈಕೋರ್ಟ್ ಸುತ್ತೋಲೆ
Sunday, October 17, 2021
ನಾಳೆ ಕೋರ್ಟಿಗಿಲ್ಲ ರಜೆ: ಕಲಾಪ ಎಂದಿನಂತೆ- ಹೈಕೋರ್ಟ್ ಸುತ್ತೋಲೆ
ಮಂಗಳವಾರ 19-10-2021ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ರಾಜ್ಯದಲ್ಲಿ ಕೋರ್ಟ್ ಕಲಾಪ ಎಂದಿನಂತೆ ಮುಂದುವರಿಯಲಿದೆ.
ರಾಜ್ಯ ಮಾನ್ಯ ಹೈಕೋರ್ಟ್ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮಂಗಳವಾರ ಕೋರ್ಟ್ ಕಲಾಪ ಅಬಾಧಿತವಾಗಲಿದ್ದು, ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದೆ.
ಈದ್ ಮಿಲಾದ್ ಆಚರಿಸುವವರು ವಿಶೇಷ ರಜೆ ಪಡೆದು ಆಚರಿಸಬಹುದು ಎಂದು ಅದು ತನ್ನ ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಿದೆ.
ಇದಕ್ಕೂ ಮುನ್ನ, ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಂದು ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಮೂನ್ ಕಮಿಟಿಯ ತೀರ್ಮಾನದಂತೆ ಈ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿತ್ತು.