
ಪಿಟಿಸಿಎಲ್ ಕಾಯ್ದೆ: ಎಸ್‌ಸಿ, ಎಸ್‌ಟಿ ಜಮೀನು ಪರಭಾರೆ ಕುರಿತ ರಾಜ್ಯ ಸರ್ಕಾರದ ಸುತ್ತೋಲೆ- ನೋಟಿಫಿಕೇಶನ್ ಕುರಿತು ಮಾಹಿತಿ
ಪಿಟಿಸಿಎಲ್ ಕಾಯ್ದೆ: ಎಸ್‌ಸಿ, ಎಸ್‌ಟಿ ಜಮೀನು ಪರಭಾರೆ ಕುರಿತ ರಾಜ್ಯ ಸರ್ಕಾರದ ಸುತ್ತೋಲೆ- ನೋಟಿಫಿಕೇಶನ್ ಕುರಿತು ಮಾಹಿತಿ
ಎಸ್‌ಸಿ ಎಸ್‌ಟಿ ಜಮೀನು ಪರಭಾರೆ: ಸರ್ಕಾರದ ಸುತ್ತೋಲೆ (28/09/2021)
ಪಿಟಿಸಿಎಲ್ ಕಾಯಿದೆಯ ವ್ಯಾಪ್ತಿಗೆ ಒಳಪಡುವ, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಬಾರೆ ಮಾಡುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ.
ಸುತ್ತೋಲೆ ಸಂಖ್ಯೆ: ಆರ್‌ಡಿ 144 ಎಲ್‌ಜಿಎಸ್ 2021
ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಹೊರಡಿಸಿರುವ ಈ ಅಧಿಸೂಚನೆಯಲ್ಲಿ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಲಾಗಿದೆ.
ಮುನ್ನಯ್ಯ ಹಾಗೂ ಇತರರು Vs ರಾಜ್ಯ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ (ರಿಟ್ ಅರ್ಜಿ ಸಂಖ್ಯೆ 60483/2014 dated 05-07-2021)ರ ತೀರ್ಪಿನ ಉದೃತ ಬಾಗವನ್ನು ಉಲ್ಲೇಖಿಸಲಾಗಿದೆ.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದೊಂದು ನಿಯಮದ ಸಡಿಲಿಕೆ ಎಂದು ಭಾವಿಸಿ ಪಿಟಿಸಿಎಲ್ ಕಾಯ್ದೆಯನ್ನು ಹೈಜಾಕ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಕಾನೂನು ಸಮ್ಮತವಲ್ಲ. ಇಂತಹ ಜಮೀನು ಪರಭಾರೆ ನಡೆಯದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು.
ಇಂತಹ ಸಡಿಲಿಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಭೂರಹಿತರಾಗುವ ಸಾಧ್ಯತೆಗಳು ಹೆಚ್ಚು. ಇದನ್ನು ತಡೆಯಲು ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಗಂಬೀರವಾಗಿ ಪಾಲಿಸಲು ಈ ಹಿಂದಿನ ಸುತ್ತೋಲೆ/ಸೂಚನೆ/ನಿರ್ದೇಶನಗಳನ್ನು ಮುಂದುವರಿಸಲಾಗಿದೆ.
ಈ ಕಾಯ್ದೆಗೆ ಒಳಪಡುವ ಜಮೀನನ್ನು ಭೂಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯ ಪೂರ್ವಾನುಮತಿ ಪಡೆದ ನಂತರವಷ್ಟೇ ಭೂಪರಿವರ್ತನೆ ಮಾಡಬೇಕು.
ಒಂದು ವೇಳೆ, ಇದಕ್ಕೂ ಮೀರಿ ಭೂಪರಿವರ್ತನೆ ಆದರೆ ಇದಕ್ಕೆ ಆಯಾ ಜಿಲ್ಲಾಧಿಕಾರಿಗಳೇ ಹೊಣೆ ಎಂದು ನೊಟೀಫಿಕೇಶನ್ ಹೇಳಿದೆ.