guidelines for speedy disposal of Family court cases- ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳ ಕ್ಷಿಪ್ರ ಇತ್ಯರ್ಥಕ್ಕೆ ಕೇರಳ ಹೈಕೋರ್ಟ್ ಮಾರ್ಗಸೂಚಿ
ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳ ಕ್ಷಿಪ್ರ ಇತ್ಯರ್ಥಕ್ಕೆ ಕೇರಳ ಹೈಕೋರ್ಟ್ ಮಾರ್ಗಸೂಚಿ
ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು ಮತ್ತು ದಾಖಲಾಗುವ ಹೊಸ ಪ್ರಕರಣಗಳನ್ನು ಕ್ಷಿಪ್ರ ಇತ್ಯರ್ಥಗೊಳಿಸಲು ಕೇರಳ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.
ಇತ್ತೀಚಿನ ಶಿಜು ಜಾಯ್ Vs ನಿಶಾ (Shiju Joy A Vs Nisha) ಪ್ರಕರಣದಲ್ಲಿ ನೀಡಲಾದ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ಮಾನ್ಯ ನ್ಯಾಯಾಲಯ ಪ್ರಕರಣಗಳ ಬಾಕಿ ಇರುವುದನ್ನು ಮತ್ತು ವಿಚಾರಣೆಗೆ ವಾಯಿದೆ ಮೇಲೆ ವಾಯಿದೆ ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಸಿ.ಎಸ್. ಡಯಾಸ್ ಮತ್ತು ನ್ಯಾ. ಎ. ಮುಹಮ್ಮದ್ ಮುಸ್ತಾಕ್ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ, ಕೌಟುಂಬಿಕ ನ್ಯಾಯಾಲಯವು ಸಂವಿಧಾನದ ಆರ್ಟಿಕಲ್ 227ರ ವಿಶೇಷಾಧಿಕಾರಿಗಳನ್ನು ಬಳಸಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ವೈವಾಹಿಕ ವಿವಾದಗಳ ಹಿನ್ನೆಲೆಯಲ್ಲಿ ಪಕ್ಷಕಾರರು ನ್ಯಾಯಾಲಯದ ಮೆಟ್ಟಿಲೇರುವುದು ಮತ್ತು ಪ್ರತಿ ಬಾರಿ ಮಹಿಳೆ ನ್ಯಾಯಾಲಯಕ್ಕೆ ಬರುವಾಗ ಅತೀವ ಕಷ್ಟವನ್ನು ಎದುರಿಸಬೇಕಾಗುತ್ತದೆ. ಇದು ಆಕೆಯ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ.
ಪ್ರಕರಣದ ವಿಚಾರಣೆ ನಡೆಸಿ ತಕ್ಷಣ ನ್ಯಾಯದಾನ ಮಾಡುವುದು ಕೋರ್ಟ್‌ನ ಪ್ರಾಥಮಿಕ ಕರ್ತವ್ಯವೂ ಆಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೇರಳ ಹೈಕೋರ್ಟ್‌ನ ಮಹತ್ವದ ತೀರ್ಪಿನ ಲಿಂಕ್‌ಗಾಗಿ ಇದನ್ನು ಬಳಸಿ
ಶಿಜು ಜಾಯ್ Vs ನಿಶಾ (Shiju Joy A Vs Nisha)