Allowance to Junior Advocates - ನವ ವಕೀಲರಿಗೆ ಶಿಷ್ಯವೇತನ, ಪ್ರೋತ್ಸಾಹ ಧನ ಪ್ರತಿ ತಿಂಗಳು ರೂ. 2000/-ಕ್ಕೆ ಏರಿಕೆ
ನವ ವಕೀಲರಿಗೆ ಶಿಷ್ಯವೇತನ, ಪ್ರೋತ್ಸಾಹ ಧನ ಪ್ರತಿ ತಿಂಗಳು ರೂ. 2000/-ಕ್ಕೆ ಏರಿಕೆ
ರಾಜ್ಯದಲ್ಲಿ ವಕೀಲರಾಗಿ ವೃತ್ತಿ ಆರಂಭಿಸುವ ನವ ಕಾನೂನು ಪದವೀಧರರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ರಾಹ ಧನವನ್ನು ರೂ. 1,000/- ದಿಂದ ರೂ. 2,000/-ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಜಾರಿಗೊಳಿಸಿದೆ.
ಈ ಬಗ್ಗೆ 23/11/2021ರಂದು ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಫಲಾನುಭವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ನೀಡಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ : ಲಾ-ಎಲ್‌ಎಡಿ/399/2021, ಬೆಂಗಳೂರು ದಿ. 23/11/202
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ರಾಜ್ಯದಲ್ಲಿ ಕಾನೂನು ಪದವಿ ಪಡೆದು ವಕೀಲರಾಗಿ ವೃತ್ತಿ ಆರಂಭಿಸುವ ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ 2014-00-102-0-06-117 (ಕಾನೂನು ಪದವೀಧರರಿಗೆ ಶಿಷ್ಯ ವೇತನ ಮತ್ತು ಪ್ರೋತ್ಸಾಹ ಧನ) ಅಡಿಯಲ್ಲಿ ಅನುದಾನ ನೀಡಲಾಗುವುದು.
ಈ ಯೋಜನೆಯಡಿ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿ ಆಧರಿಸಿ ಜಿಲ್ಲಾವಾರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಅಗತ್ಯ ಅನುದಾನವನ್ನು ಆಯ್ಕೆ ಪಟ್ಟಿ ಪಡೆದ ನಂತರ ಬಿಡುಗಡೆ ಮಾಡಲಾಗುವುದು.
ರಾಜ್ಯದಲ್ಲಿ ಏಕಕಾಲಕ್ಕೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿ ಒಂದೇ ವೇಳಾಪಟ್ಟಿಯಲ್ಲಿ ಈ ಯೋಜನೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಹತೆ:
1) 1-06-2020ರಿಂದ 31-05-2021ರ ವರೆಗೆ ವಕೀಲ ವೃತ್ತಿಗೆ ನೋಂದಾಯಿಸಿದವರಿಗೆ ಅನ್ವಯ
2) ಪ್ರತಿ ತಿಂಗಳು ರೂ. 2000/- ದಂತೆ 24 ತಿಂಗಳು ಅವಧಿಗೆ ಯೋಜನೆ ಸೀಮಿತ
3) ಸರ್ಕಾರಿ, ಅರೆ ಸರ್ಕಾರಿ ಯಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಯಾ ಕಡ್ಡಾಯ ನಿವೃತ್ತಿ ಪಡೆದ, ಸ್ವ ಇಚ್ಚಾ ನಿವೃತ್ತಿ ಪಡೆದು ವಕೀಲಿಕೆ ಮಾಡುವವರಿಗೆ ಈ ಯೋಜನೆ ಅನ್ವಯವಾಗದು
4) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಮಿತಿ ರೂ. 40,000/- ಮೀರಿರಬಾರದು.
5) ಅಭ್ಯರ್ಥಿ ಇಂತಹ ಯೋಜನೆ/ಈ ಯೋಜನೆ/ ಇತರ ಯೋಜನೆಯಡಿ ಯಾ ರಾಜ್ಯ ಸರ್ಕಾರದ ಬೇರೆ ಯಾವುದೇ ಇಲಾಖೆಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಲ್ಲ.
6) ತಾಲೂಕು ಹಂತಗಳಲ್ಲಿ ಹಿರಿಯ ನ್ಯಾಯಾಧೀಶರ ಮೂಲಕ, ಜಿಲ್ಲಾ ಹಂತದಲ್ಲಿ ನೇರವಾಗಿ ಸಮಿತಿ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು.
7) ಸತ್ರ ನ್ಯಾಯಾಧೀಶರು ಜಿಲ್ಲೆ ವ್ಯಾಪ್ತಿಗೆ ಬರುವ ತಾಲೂಕಿನಲ್ಲಿ ಆಗಿರುವ ಪ್ರಗತಿ ಬಗ್ಗೆ ಪ್ರತಿ ತಿಂಗಳಿಗೆ ವರದಿ ನೀಡಬೇಕು.
8) ರಾಜ್ಯದಲ್ಲಿ ಏಕರೂಪದ ವೇಳಾಪಟ್ಟಿ ಕಾಲಾವಧಿ ಅನ್ವಯ.