-->
Credit Card- ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ... ನಿಮಗಿದೆ ಶಾಕಿಂಗ್ ನ್ಯೂಸ್!

Credit Card- ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ... ನಿಮಗಿದೆ ಶಾಕಿಂಗ್ ನ್ಯೂಸ್!

ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ... ನಿಮಗಿದೆ ಶಾಕಿಂಗ್ ನ್ಯೂಸ್!






ಡಿಸೆಂಬರ್ 1ರಿಂದ SBI ಕ್ರೆಡಿಟ್ ಕಾರ್ಡ್ ಹೊಂದಿದ್ದವರಿಗೆ ಶಾಕಿಂಗ್ ನ್ಯೂಸ್.

ದೇಶದ ಬಹುದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿರುವ SBI ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ವಿಧಿಸುವ ವಾರ್ಷಿಕ ಸೇವಾ ಶುಲ್ಕ ಮತ್ತು ನಿರ್ವಹಣಾ ಶುಲ್ಕವನ್ನು ಪರಿಷ್ಕರಿಸಿದೆ. ಡಿಸೆಂಬರ್ 1ರಿಂದ ಹೊಸ ಶುಲ್ಕ ಜಾರಿಯಾಗುತ್ತಿದೆ.



ಕ್ರೆಡಿಟ್ ಕಾರ್ಡ್ ಬಳಸಿ ಮಾಸಿಕ ಕಂತಿನ (EMI) ಮೇಲೆ ಗ್ರಾಹಕ ವಸ್ತುಗಳನ್ನು ಖರೀದಿಸುವವರು ಇನ್ನು ಮುಂದೆ ನಿರ್ವಹಣಾ ಶುಲ್ಕವಾಗಿ ರೂ. 99/- ಮತ್ತು ಹೆಚ್ಚುವರಿಯಾಗಿ ತೆರಿಗೆ ಹಣವನ್ನು ಪ್ರತಿ ತಿಂಗಳೂ ಪಾವತಿ ಮಾಡಬೇಕಾಗುತ್ತದೆ.



ದೀರ್ಘಾವಧಿಯ ಕಂತುಗಳಾಗಿದ್ದರೆ ಹೆಚ್ಚುವರಿ ನಿರ್ವಹಣ ಶುಲ್ಕ ಹಾಗೂ ಅದಕ್ಕೆ ಹಾಕುವ ತೆರಿಗೆಯು ಬಡ್ಡಿದರಕ್ಕಿಂತ ಈ ಮೊತ್ತವೇ ಅಧಿಕವಾಗಲಿದೆ.



ಕೆಲವು ಬಾರಿ ಶೂನ್ಯ ಬಡ್ಡಿದರದಲ್ಲಿ ಕೆಲವು ಕಂಪೆನಿಗಳು ವಸ್ತುಗಳನ್ನು ಖರೀದಿಸಲು ಅವಕಾಶ ನೀಡುತ್ತದೆ. ಅಂತಹ ಹೊತ್ತಿನಲ್ಲೂ SBI ಬಳಕೆದಾರರು ತೆರಿಗೆ ಮತ್ತು ಪ್ರಕ್ರಿಯೆಯ ಶುಲ್ಕವನ್ನು ತೆರಬೇಕಾಗುತ್ತದೆ.


ಅಂದ ಹಾಗೆ, ಹೆಚ್ಚುವರಿ ಶುಲ್ಕ ಮತ್ತು ಪರಿಷ್ಕರಿಸಿದ ದರಗಳು ಡಿಸೆಂಬರ್ 1, 2021ರಿಂದ ಜಾರಿಯಾಗಲಿದೆ..

Ads on article

Advertise in articles 1

advertising articles 2

Advertise under the article