-->
Jai Bheem, a real story of a Justice- ತಮಿಳಿನ ಜೈಭೀಮ್: ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರು ಎಂಬುವರ ನೈಜ ಕಥನ

Jai Bheem, a real story of a Justice- ತಮಿಳಿನ ಜೈಭೀಮ್: ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರು ಎಂಬುವರ ನೈಜ ಕಥನ

ತಮಿಳಿನ ಜೈಭೀಮ್: ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರು ಎಂಬುವರ ನೈಜ ಕಥನ




ಸುಮಾರು ಮೂವತ್ತು ವರ್ಷಗಳ ಹಿಂದೆ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಚಂದ್ರುರವರು,

ಸಿಪಿಐಎಂ ಸಂಘಟನೆ ಕೋರಿಕೆ ಮೇರೆಗೆ ರಾಜಕಣ್ಣು ಎಂಬ ಇರುಳ ಜನಾಂಗಕ್ಕೆ ಸೇರಿದ ನತದೃಷ್ಟನ ಸಾವಿನ ಬಗ್ಗೆ ಹೋರಾಡಿ ಪೊಲೀಸರಿಗೆ ಶಿಕ್ಷೆ ಕೊಡಿಸಿದರಲ್ಲದೆ, ಇರುಳ ಜನಾಂಗಕ್ಕೆ ವಸತಿ, ರೇಷನ್ ಕಾರ್ಡು, ಮತದಾರರ ಪಟ್ಟಿಯಲ್ಲಿ ಹೆಸರು ಸೇರುವಂತೆ ಮಾಡಿದರು.




ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ 96 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ವಿಲೇವಾರಿ ಮಾಡಿ ತೀರ್ಪನ್ನು ನೀಡುವುದರ ಮೂಲಕ ದಾಖಲೆ ಮಾಡಿದ್ದಾರೆ. ದಿನವೊಂದಕ್ಕೆ ಎಪ್ಪತ್ತೈದು ಪ್ರಕರಣಗಳನ್ನು ರಾತ್ರಿ ಒಂಬತ್ತು ಗಂಟೆಯವರೆಗೆ ಅವರು ವಿಚಾರಣೆ ನಡೆಸುತ್ತಿದ್ದರಂತೆ.




ಜನಪರ, ಸಾಮಾಜಿಕ ಕಳಕಳಿ ಇರುವ ವಿಚಾರಧಾರೆಯಿಂದ ಬಂದ ಬಹುತೇಕ ವಕೀಲರು ಮತ್ತು ನ್ಯಾಯಾಧೀಶರಲ್ಲಿ ಇಂತಹ ಮಾನವೀಯ ಗುಣಗಳನ್ನು ನಾವು ಕಾಣಬಹುದು. ಹಿಂದಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ "ಜೈ ಭೀಮ್" ಚಲನಚಿತ್ರವನ್ನು ಈ ಕಾರಣಕ್ಕಾಗಿಯಾದರೂ ತಪ್ಪದೇ ನೋಡಬೇಕು.




ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಚಳುವಳಿಗೆ ಹಾಗು ಆ ಚಳುವಳಿಯ ಕಾರ್ಯಕರ್ತರಿಗೆ ಮಾತ್ರವಲ್ಲ "ಸಹಜ ನ್ಯಾಯ" (natural justice)ದ ಅನುಷ್ಟಾನಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ತುಂಬುವ ಅತ್ಯುತ್ತಮ ಚಲನಚಿತ್ರ ಎಂಬುದು ವಿಮರ್ಶಕರ ಅನಿಸಿಕೆ.







Ads on article

Advertise in articles 1

advertising articles 2

Advertise under the article