21 Dist Judge Post Recruitment Notification- ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿ: ಇಲ್ಲಿದೆ ಮಹತ್ವದ ಮಾಹಿತಿ
ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿ: ಇಲ್ಲಿದೆ ಮಹತ್ವದ ಮಾಹಿತಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 21 ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ 9/11/2021ರಂದು ಮಹತ್ವದ ಅಧಿಸೂಚನೆ ಹೊರಡಿಸಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 9/12/2021ರಂದು ಕೊನೆಯ ದಿನವಾಗಿರುತ್ತದೆ. ಇದರಲ್ಲಿ 18 ಬ್ಯಾಕ್‌ಲಾಗ್ ಹುದ್ದೆಗಳಾಗಿದ್ದು, ಮೂರು ಹೊಸ ನೇಮಕಾತಿ ಆಗಿರುತ್ತದೆ.
ಅರ್ಹತೆಗಳು
ಅಭ್ಯರ್ಥಿಗಳು ಕಡ್ಡಾಯವಾಗಿ ಕಾನೂನು ಪದವೀಧರರಾಗಿರರಬೇಕು.
ರಾಜ್ಯ ಹೈಕೋರ್ಟ್ ಅಥವಾ ಅಧೀನ ನ್ಯಾಯಾಲಯದಲ್ಲಿ ಕನಿಷ್ಟ ಏಳು ವರ್ಷಗಳಿಗೆ ಕಡಿಮೆ ಇಲ್ಲದಂತೆ ವಕೀಲರಾಗಿ ವೃತ್ತಿ ಸೇವೆಯನ್ನು ಮಾಡಿರಬೇಕು.
ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸರ್ಕಾರಿ ವಕೀಲರು ತಮ್ಮ ಸರ್ಕಾರಿ ವೃತ್ತಿಯ ಸೇವೆಯಲ್ಲಿ ನಿರಂತರವಾಗಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿರಬೇಕು.
ವಯೋಮಿತಿ: ಗರಿಷ್ಟ 45 ವರ್ಷ. (ಪ. ಜಾತಿ ಮತ್ತು ಪ. ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 48 ವರ್ಷ)
ವೇತನ ಶ್ರೇಣಿ: Rs. 51500-1230-58930-1380-63070
ಪ್ರೊಬೇಷನ್: ನೇಮಕಗೊಂಡ ಮೊದಲ ಎರಡು ವರ್ಷ ಅಥವಾ ಮುಂದುವರಿಸಬಹುದಾದ ಅವಧಿಗೆ ಅಭ್ಯರ್ಥಿಯು ಪ್ರೊಬೇಷನರಿ ಅವಧಿಯಲ್ಲಿ ಇರುತ್ತಾರೆ. ಅಗತ್ಯಬಿದ್ದರೆ, ಹೈಕೋರ್ಟ್ ನಿಯೋಜಿಸಿದ ತರಬೇತಿಯಲ್ಲಿ ಭಾಗಿಯಾಗಬೇಕು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್ :
ತಮ್ಮ ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಯು ಆನ್‌ಲೈನ್ ಯಾ ಚಲನ್ ಬಳಸಿ ಅರ್ಜಿ ಶುಲ್ಕ ಪಾವತಿಸತಕ್ಕದ್ದು.
http://karnatakajudiciary.kar.nic.in/recruitment.php
http://karnatakajudiciary.kar.nic.in/recruitment.php