KSBC Annual Subscription Circular- ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಚಂದಾ: ಕರ್ನಾಟಕ ವಕೀಲರ ಪರಿಷತ್ ಸುತ್ತೋಲೆ
ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಚಂದಾ: ಕರ್ನಾಟಕ ವಕೀಲರ ಪರಿಷತ್ ಸುತ್ತೋಲೆ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ವಾರ್ಷಿಕ ಚಂದಾ ನೀಡುವಂತೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ 23/11/2021ರಂದು ಸುತ್ತೋಲೆ ಹೊರಡಿಸಿದೆ.
31/12/2006ರ ವರೆಗೆ ವಕೀಲರ ಸದಸ್ಯತ್ವ ನೋಂದಾಯಿಸಿದ ವಕೀಲರು ರೂ. 2000/- ವಂತಿಗೆ ನೀಡಬೇಕು.
01/01/2007ರಿಂದ 31/12/2020ರ ಮಧ್ಯೆ ವಕೀಲರ ಸದಸ್ಯತ್ವ ನೋಂದಾಯಿಸಿದ ವಕೀಲರು 1000/- ವಂತಿಗೆ ನೀಡಬೇಕು.
ಜೂನ್ 30,2022ರ ವರೆಗೆ ಈ ಸಾಲಿನ ವಂತಿಗೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ವಕೀಲರು ಪ್ರತಿ ತಿಂಗಳು ತಲಾ ರೂ. 100/- ದಂಡವಾಗಿ ಹೆಚ್ಚಿನ ಹಣವನ್ನು ಭರಿಸಬೇಕಾಗುತ್ತದೆ. ಆದರೆ, 2010-2020 ವರೆಗಿನ ವಂತಿಗೆಯನ್ನು ನೀಡಲು ಯಾವುದೇ ಅವಕಾಶ ಇಲ್ಲ ಎಂದು ಸುತ್ತೋಲೆ ತಿಳಿಸಿದೆ.
ಆಜೀವ ಸದಸ್ಯತ್ವ ವಂತಿಗೆಯಾಗಿ ರೂ. 15000/- ನೀಡಿರುವ ವಕೀಲ ಸದಸ್ಯರು ವ್ಯತ್ಯಾಸದ ಹಣ ರೂ. 13700/-ನ್ನು ನಗದಾಗಿ ನೀಡಬೇಕು. ಇದರಲ್ಲಿ ರೂ. 10000/- ವ್ಯತ್ಯಾಸದ ಮೊತ್ತ/ ವಂತಿಗೆ(Difference Amount) ಸೇರಿರುತ್ತದೆ. ಉಳಿದಂತೆ ಜೂನ್ 2018 ರಿಂದ ಡಿಸೆಂಬರ್ 2021ರ ವರೆಗೆ ಪ್ರತಿ ತಿಂಗಳು ತಲಾ ರೂ. 100/- ವಿಳಂಬ ಶುಲ್ಕವಾಗಿ ನೀಡಬೇಕಾಗುತ್ತದೆ.
ಆಜೀವ ಸದಸ್ಯರು ತಮ್ಮ ಆಜೀವ ಸದಸ್ಯತ್ವದ ಮೂಲ ಪ್ರತಿ ಸರ್ಟಿಫಿಕೇಟನ್ನು ಹಾಜರುಪಡಿಸಬೇಕು.
ಕಚೇರಿಯಲ್ಲಿ ಪಾವತಿಸುವ ವಕೀಲರು ನಗದು ಕೌಂಟರಿನಲ್ಲಿ ನಗದು ಮೊತ್ತವನ್ನು ಪಾವತಿಸಿ ರಶೀದಿಯ ಕಚೇರಿ ಪ್ರತಿಯನ್ನು ನಗದು ಕೌಂಟರ್‌ನಲ್ಲಿ ಹಾಕುವಂತೆ ಕೋರಲಾಗಿದೆ.
ಈ ಹಿಂದೆ ನೀಡಲಾದ ಬ್ಯಾಂಕ್ ಖಾತೆಗೆ ಯಾರೂ ವಂತಿಗೆಯನ್ನು ಪಾವತಿಸದಂತೆ ಮನವಿ ಮಾಡಲಾಗಿದೆ. ಏಕೆಂದರೆ, ಈ ಖಾತೆಯನ್ನು ಈಗಾಗಲೇ ಮುಚ್ಚಲಾಗಿದೆ. ಮತ್ತು ಬ್ಯಾಂಕ್ ಖಾತೆಗೆ ಜಮೆ ಮಾಡಲಾದ ಯಾವುದೇ ವಂತಿಗೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸುತ್ತೋಲೆಯಲ್ಲಿ ತಿಳಿಸಿದೆ.
ವಕೀಲರು ತಮ್ಮ ವೈಯಕ್ತಿಕ ವಂತಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಅದಕ್ಕೆ ಅವರು ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
https://ksbc.org.in/