RBI direction on Co-op Societies- ಸಹಕಾರ ಸಂಘಗಳು "ಬ್ಯಾಂಕ್" ಪದ ಬಳಸಬಹುದೇ..?: ಆರ್‌ಬಿಐ ಏನು ಹೇಳುತ್ತದೆ...?
ಸಹಕಾರ ಸಂಘಗಳು "ಬ್ಯಾಂಕ್" ಪದ ಬಳಸಬಹುದೇ..?: ಆರ್‌ಬಿಐ ಏನು ಹೇಳುತ್ತದೆ...?
ಸಹಕಾರ ಸಂಘಗಳು ತಮ್ಮ ಹೆಸರಿನ ಜೊತೆಗೆ "ಬ್ಯಾಂಕ್" ಪದ ಬಳಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ- ಆರ್‌ಬಿಐ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.
ಸಹಕಾರ ಸಂಘಗಳು ತಮ್ಮ ಹೆಸರಿನ ಜೊತೆಗೆ "ಬ್ಯಾಂಕ್" ಪದವನ್ನು ಉಪಯೋಗಿಸುವುದು ಮತ್ತು ತಮ್ಮ ಸದಸ್ಯರಲ್ಲದವರಿಂದಲೂ ಠೇವಣಿ ಸ್ವೀಕರಿಸುತ್ತಿರುವ ವಿಚಾರದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ಸೋಮವಾರ ಈ ಬಗ್ಗೆ ನಿರ್ದೇಶನಾತ್ಮಕ ಸೂಚನೆಗಳನ್ನು ಜಾರಿಗೊಳಿಸಿರುವ ಆರ್‌ಬಿಐ, 29/09/2020ರಂದು ಜಾರಿಗೆ ಬಂದಿರುವ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯ್ದೆ ಪ್ರಕಾರ ಆರ್‌ಬಿಐನಿಂದ ಅನುಮತಿ ಪಡೆದಿರುವ ಸಹಕಾರ ಸಂಘಗಳಿಗೆ ಮಾತ್ರ ತಮ್ಮ ಹೆಸರಿನ ಜೊತೆ "ಬ್ಯಾಂಕ್" ಪದವನ್ನು ಉಪಯೋಗಿಸಬಹುದು ಎಂದು ಹೇಳಿದೆ.
ಇತರ ಯಾವುದೇ ಸಹಕಾರ ಸಂಘಗಳು ತಮ್ಮ ಹೆಸರಿನ ಜೊತೆಗೆ "ಬ್ಯಾಂಕ್" "ಬ್ಯಾಂಕರ್" "ಬ್ಯಾಂಕಿಂಗ್" ಪದ ಬಳಸುವಂತಿಲ್ಲ ಎಂದು ಹೇಳಿದೆ.
ಈ ಕಾಯ್ದೆ ಜಾರಿಗೆ ಬಂದ ನಂತರವೂ ಕೆಲವೊಂದು ಸಹಕಾರಿ ಸಂಘಗಳು ತಮ್ಮ ಹೆಸರಿನ ಜೊತೆಗೆ ಈ ಮೇಲಿನ ಪದಗಳನ್ನು ಬಳಸುತ್ತಿರುವುದು ಕಂಡುಬಂಧಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಆರ್‌ಬಿಐ, ಸಾರ್ವಜನಿಕರು ಎಚ್ಚರಿಕೆಯಿಂದ ಇಂತಹ ಸಂಸ್ಥೆಗಳ ಜೊತೆ ವ್ಯವಹರಿಸಬೇಕು ಎಂದು ಹೇಳಿದೆ.