-->
Sail Vs Gauri Devi- ಅನುಕಂಪದ ನೇಮಕಾತಿ ದೀರ್ಘ ಕಾಲಾವಧಿ ಸಂದ ಬಳಿಕ ಕೋರಲಾಗದು: ಸುಪ್ರೀಂ ಕೋರ್ಟ್

Sail Vs Gauri Devi- ಅನುಕಂಪದ ನೇಮಕಾತಿ ದೀರ್ಘ ಕಾಲಾವಧಿ ಸಂದ ಬಳಿಕ ಕೋರಲಾಗದು: ಸುಪ್ರೀಂ ಕೋರ್ಟ್

ಅನುಕಂಪದ ನೇಮಕಾತಿ ದೀರ್ಘ ಕಾಲಾವಧಿ ಸಂದ ಬಳಿಕ ಕೋರಲಾಗದು: ಸುಪ್ರೀಂ ಕೋರ್ಟ್





ಉದ್ಯೋಗಿ ಮೃತರಾಗಿ 18 ವರ್ಷ ಕಳೆದ ಬಳಿಕವೂ ಅನುಕಂಪದ ಆಧಾರದಲ್ಲಿ ಎರಡನೇ ಮಗನಿಗೆ ಉದ್ಯೋಗ ನೀಡಲು ನಿರ್ದೇಶಿಸಿರುವ ನ್ಯಾಯ ಮಂಡಳಿಯ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ Vs ಗೌರಿ ದೇವಿ ಪ್ರಕರಣದಲ್ಲಿ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ಉದ್ದರಿಸಿದೆ.

(ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ Vs ಗೌರಿ ದೇವಿ)



Steel Authority Of India Limited ಉದ್ಯೋಗಿಯೊಬ್ಬರು ಮೃತಪಟ್ಟು 18 ವರ್ಷಗಳು ಕಳೆದ ನಂತರ ಇದೀಗ ಅವರ ಎರಡನೇ ಮಗ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ಕೋರಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.



ಈ ಹಿಂದೆ, ಉದ್ಯೋಗಿ ಮೃತಪಟ್ಟ ಎರಡು ವರ್ಷಗಳ ನಂತರ ಮೊದಲನೇ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸೆಪ್ಟೆಂಬರ್ 1, 1975ರ ನಿಯಮಗಳಿಗೆ ಅನುಗುಣವಾಗಿ ಸಾರ್ವಜನಿಕ ವಲಯ ಉದ್ಯಮವಾದ ಸೇಲ್ ತಿರಸ್ಕರಿಸಿತ್ತು.



ಇದಾದ 18 ವರ್ಷಗಳ ಬಳಿಕ ಎರಡನೇ ಮಗನಿಗೆ ಉದ್ಯೋಗ ನೀಡುವಂತೆ ಕೋರಿ ಮೃತರ ಪತ್ನಿ ಒಡಿಶಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೇಂದ್ರೀಯ ಆಳೀತ ಮಂಡಳಿಯು ನೀಡಿದ್ದ ಆದೇಶವನ್ನು ಒಡಿಶಾ ಹೈಕೋರ್ಟ್ ಎತ್ತಿ ಹಿಡಿದಿತ್ತು.


ಇದನ್ನು ಪ್ರಶ್ನಿಸಿ SAIL ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.



ಪಂಜಾಬ್ ವಿದ್ಯುಚ್ಚಕ್ತಿ ಮಂಡಳಿ ನಿಯಮಿತ ಮತ್ತಿತರರು Vs ನಿರ್ವಲ್ ಸಿಂಗ್

ಜಮ್ಮು ಕಾಶ್ಮೀರ Vs ಸಜ್ಜದ್ ಅಹಮದ್ ಮೀರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಹೈಕೋರ್ಟ್‌ನ ತೀರ್ಪು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದೆ. ಮತ್ತು ಹೈಕೋರ್ಟ್‌ ತೀರ್ಪನ್ನು ತಿರಸ್ಕರಿಸಿ ತೀರ್ಪು ನೀಡಿದೆ.



Ads on article

Advertise in articles 1

advertising articles 2

Advertise under the article