SC on rituals in Temple- ದೇವಾಲಯದ ಪೂಜೆ ವಿಚಾರದಲ್ಲಿ ಮಧ್ಯವೇಶ ಇಲ್ಲ: ಸುಪ್ರೀಂ ಕೋರ್ಟ್
ದೇವಾಲಯದ ಪೂಜೆ ವಿಚಾರದಲ್ಲಿ ಮಧ್ಯವೇಶ ಇಲ್ಲ: ಸುಪ್ರೀಂ ಕೋರ್ಟ್
ದೇಗುಲ ಪೂಜೆ ವಿಚಾರದಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಗುಲದಲ್ಲಿ ಪೂಜೆ ಹೇಗೆ ಮಾಡಬೇಕು, ತೆಂಗಿನಕಾಯಿ ಹೇಗೆ ಒಡೆಯಬೇಕು? ಆರತಿ ಹೇಗೆ ಮಾಡಬೇಕು? ಎಂಬುದರ ಬಗ್ಗೆ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಸುಪ್ರೀಂ ನ್ಯಾಯಪೀಠ ಹೇಳಿದೆ.
ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಕ್ರಮಬದ್ಧವಾಗಿ ಪೂಜೆಗಳು ನಡೆಯುತ್ತಿಲ್ಲ ಎಂದು ಆಕ್ಷೇಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಆಂಧ್ರ ಪ್ರದೇಶ ಹೈಕೋರ್ಟ್, ಈ ಅರ್ಜಿಯ ವಿಚಾರಣೆ ನಡೆಸಿ ದೇಗುಲದ ಪೂಜೆ ವಿಚಾರದಲ್ಲಿ ಮಧ್ಯಪ್ರವೇಶ ನಡೆಸಲಾಗದು ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಸಂಬಂಧ, ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ತನ್ನ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ದೇವಾಲಯದ ಆಡಳಿತಾತ್ಮಕ ವಿಚಾರದಲ್ಲಿ ಲೋಪ, ದೇವರ ದರ್ಶನದಲ್ಲಿ ತಾರತಮ್ಯ ಇತ್ಯಾದಿ ವಿಚಾರ ಇದ್ದರೆ ಮಾತ್ರ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಿದೆ.