Viral Order by DJ- "ಸ್ಟೆನೊ ಇಲ್ಲ, ಟೈಪ್ ಮಾಡಿ ಭುಜನೋವು.. ಟೈಪ್ ಮಾಡಲಾಗುತ್ತಿಲ್ಲ": ಡಿಸ್ಟ್ರಿಕ್ಟ್ ಜಡ್ಜ್ ಆದೇಶ ವೈರಲ್...!
Friday, November 19, 2021
"ಸ್ಟೆನೊ ಇಲ್ಲ, ಟೈಪ್ ಮಾಡಿ ಭುಜನೋವು.. ಟೈಪ್ ಮಾಡಲಾಗುತ್ತಿಲ್ಲ": ಡಿಸ್ಟ್ರಿಕ್ಟ್ ಜಡ್ಜ್ ಆದೇಶ ವೈರಲ್...!
"ಸ್ಟೆನೊ ಇಲ್ಲ, ಟೈಪ್ ಮಾಡಿ ಭುಜನೋವು.. ಟೈಪ್ ಮಾಡಲಾಗುತ್ತಿಲ್ಲ" ಹೌದು, ಇದು ಯಾವುದೇ ಜೋಕ್ ಅಲ್ಲ, ನಿಜಕ್ಕೂ ಡಿಸ್ಟ್ರಿಕ್ಟ್ ಜಡ್ಜ್ ನೀಡಿದ ಆದೇಶ.
ತಮಿಳುನಾಡು ರಾಜ್ಯದ ಜಿಲ್ಲಾ ನ್ಯಾಯಾಧೀಶರೊಬ್ಬರು ನೀಡಿದ ಆದೇಶ ನ್ಯಾಯಾಂಗ ಇಲಾಖೆಯ ಅವ್ಯವಸ್ಥೆಗೆ ಕೈಗನ್ನಡಿ ಹಿಡಿದಿದೆ.
ಕಾಂಚಿಪುರ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ನೀಡಿದ ವಿಚಿತ್ರ ಆದೇಶ...
"ಸ್ಟೆನೊ ರಜೆಯಲ್ಲಿದ್ದಾರೆ. ನಾನೇ ಆದೇಶವನ್ನು ಟೈಪ್ ಮಾಡುತ್ತಿದ್ದೇನೆ. ಹಾಗಾಗಿ ನನಗೆ ಕಳೆದ ಎರಡು ದಿನಗಳಿಂದ ಭುಜ ನೋವು ಕಾಣಿಸಿಕೊಂಡಿದೆ. ಈ ನೋವಿನಿಂದಾಗಿ ನಾನು ನನ್ನ ಆದೇಶಗಳನ್ನು ಟೈಪ್ ಮಾಡಲಾಗುತ್ತಿಲ್ಲ. ಹಾಗಾಗಿ, ಆದೇಶಕ್ಕಾಗಿ ವಾಯಿದೆ (18/11/2021)ಕ್ಕೆ ನೀಡುತ್ತಿದ್ಧನೆ..."
ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಿಲ್ಲಾ ನ್ಯಾಯಾಧೀಶರು ನೀಡಿದ ಆದೇಶ ವೈರಲ್ ಆಗಿದೆ.