-->
2022 change in Supreme Court- ಸುಪ್ರೀಂ ನ್ಯಾಯಪೀಠದಲ್ಲಿ 2022 ಬದಲಾವಣೆಗಳ ವರ್ಷ: ಮೂರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ ಅಪೆಕ್ಸ್ ಕೋರ್ಟ್

2022 change in Supreme Court- ಸುಪ್ರೀಂ ನ್ಯಾಯಪೀಠದಲ್ಲಿ 2022 ಬದಲಾವಣೆಗಳ ವರ್ಷ: ಮೂರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ ಅಪೆಕ್ಸ್ ಕೋರ್ಟ್

ಸುಪ್ರೀಂ ನ್ಯಾಯಪೀಠದಲ್ಲಿ 2022 ಬದಲಾವಣೆಗಳ ವರ್ಷ: ಮೂರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ ಅಪೆಕ್ಸ್ ಕೋರ್ಟ್






ಸರ್ವೋಚ್ಚ ನ್ಯಾಯಾಲಯದ ಅಂಗಣದಲ್ಲಿ 2022 ಬದಲಾವಣೆಗಳ ವರ್ಷವಾಗಲಿದೆ. ಈ ವರ್ಷ ಮೂರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ ಅಪೆಕ್ಸ್ ಕೋರ್ಟ್.



ಅದರ ಜೊತೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿರುವವರ ಪೈಕಿ ಎಂಟು ಮಂದಿ 2022ರಲ್ಲಿ ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್‌ ಸಮೀಕರಣವೂ ಬದಲಾವಣೆಯಾಗಲಿದೆ.




2022 ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಹಾಲಿ ಸಿಜೆಐ ಎನ್‌. ವಿ ರಮಣ ನ್ಯಾಯಪೀಠದಿಂದ ನಿವೃತ್ತರಾಗಲಿದ್ದಾರೆ. ನ್ಯಾ. ಯು. ಯು. ಲಲಿತ್ ಹಾಗೂ ಅವರ ಬಳಿಕ ನ್ಯಾ. ಡಿ ವೈ ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಲಿದ್ದಾರೆ.





ಇದರೊಂದಿಗೆ, 2022ರಲ್ಲಿ "ಮಾಸ್ಟರ್‌ ಆಫ್‌ ರೋಸ್ಟರ್" ಅಧಿಕಾರವು ಮೂರು ಕೈ ಬದಲಾಗಲಿದೆ.



ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿಗಳು (ನಿವೃತ್ತಿಯಾಗಲಿರುವ ತಿಂಗಳು)

ನ್ಯಾ. ಆರ್‌ ಸುಭಾಷ್‌ ರೆಡ್ಡಿ – ಜನವರಿ 4

ನ್ಯಾ. ವಿನೀತ್‌ ಶರಣ್‌ – ಮೇ 10

ನ್ಯಾ. ಎಲ್‌ ನಾಗೇಶ್ವರ ರಾವ್‌ – ಜೂನ್‌ 7

ನ್ಯಾ. ಎ ಎಂ ಖಾನ್ವಿಲ್ಕರ್‌ – ಜುಲೈ 29

ಸಿಜೆಐ ಎನ್‌ ವಿ ರಮಣ – ಆಗಸ್ಟ್‌ 26

ನ್ಯಾ. ಇಂದಿರಾ ಬ್ಯಾನರ್ಜಿ – ಸೆಪ್ಟೆಂಬರ್‌ 23

ನ್ಯಾ. ಹೇಮಂತ್‌ ಗುಪ್ತಾ – ಅಕ್ಟೋಬರ್‌ 16

ನ್ಯಾ. ಯು ಯು ಲಲಿತ್ – ನವೆಂಬರ್‌ 8 (ಮುಖ್ಯ ನ್ಯಾಯಮೂರ್ತಿ ಆಗಿ ನಿವೃತ್ತಿ)


ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಆಗಸ್ಟ್‌ 26ರಂದು ನಿವೃತ್ತರಾಗಲಿದ್ದಾರೆ. ಆ ಬಳಿಕ ಯು ಯು ಲಲಿತ್ ಅವರು ಅಲ್ಪಕಾಲದವರೆಗೆ ಮುಖ್ಯ ನ್ಯಾಯಮೂರ್ತಿ ಪದ ಜವಾಬ್ದಾರಿ ವಹಿಸಲಿದ್ದಾರೆ. 



ನವೆಂಬರ್‌ 8ಕ್ಕೆ ನ್ಯಾ. ಲಲಿತ್‌ ನಿವೃತ್ತಿ ಹೊಂದಲಿದ್ದು, ನ್ಯಾ. ಚಂದ್ರಚೂಡ್‌ ಸಿಜೆಐ ಆಗಿ ನೇಮಕವಾಗಲಿದ್ದಾರೆ.



ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಅವಧಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿರುವ ನ್ಯಾ. ಚಂದ್ರಚೂಡ್‌ ಎರಡು ವರ್ಷಗಳಿಗೂ ಹೆಚ್ಚು ಕಾಲ ಮುಖ್ಯ ನ್ಯಾಯಮೂರ್ತಿ ಆಗಲಿದ್ದು, 2024ರ ನವೆಂಬರ್ 10ರವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

Ads on article

Advertise in articles 1

advertising articles 2

Advertise under the article