Advocate Suspend- ವರ್ಚುವಲ್ ಟ್ರಯಲ್ ವೇಳೆ ಮಹಿಳೆ ಜೊತೆ ಚಕ್ಕಂದ: ತ.ನಾಡು ರಾಜ್ಯ ವಕೀಲರ ಪರಿಷತ್‌ನಿಂದ ಆರೋಪಿ ವಕೀಲ ವಜಾ
ವರ್ಚುವಲ್ ಟ್ರಯಲ್ ವೇಳೆ ಮಹಿಳೆ ಜೊತೆ ಚಕ್ಕಂದ
ತ.ನಾಡು ರಾಜ್ಯ ವಕೀಲರ ಪರಿಷತ್‌ನಿಂದ ಆರೋಪಿ ವಕೀಲ ವಜಾ
ನ್ಯಾಯಾಲಯದ ವಿಚಾರಣೆ ವೇಳೆ ವಕೀಲ ಆರ್ ಡಿ ಸಂತಾನ ಕೃಷ್ಣನ್ ಅವತಾರ
ಮಹಿಳೆ ಜೊತೆ ಅಪ್ಪಿಕೊಂಡ ಭಂಗಿಯಲ್ಲಿದ್ದ ವಕೀಲ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವೀಡಿಯೋ
ವಕೀಲ ಸಮುದಾಯವೇ ತಲೆತಗ್ಗಿಸುವಂತೆ, ವರ್ಚುವಲ್ ವಿಚಾರಣೆ ಸಂದರ್ಭದಲ್ಲಿ ಮಹಿಳೆಯೊಬ್ಬರ ಜೊತೆ ವಕೀಲ ಆರ್ ಡಿ ಸಂತಾನ ಕೃಷ್ಣನ್ ಎಂಬಾತ ಚಕ್ಕಂದದಲ್ಲಿ ತೊಡಗಿದ್ದ. ಈತನನ್ನು ದೇಶದ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವಕೀಲ ವೃತ್ತಿ ಮಾಡದಂತೆ ತಮಿಳುನಾಡು ಮತ್ತು ಪುದುಚೇರಿ ರಾಜ್ಯ ಬಾರ್ ಕೌನ್ಸಿಲ್ ಅಮಾನತುಗೊಳಿಸಿದೆ.
ಸಂತಾನ ಕೃಷ್ಣನ್ ಅವರ ವಿರುದ್ಧದ ಶಿಸ್ತುಕ್ರಮದ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿದೆ ಎಂದು ವಕೀಲರ ಸಂಘ ಹೇಳಿದೆ.
ಮದ್ರಾಸ್ ಹೈಕೋರ್ಟ್‌ನ ಹಿರಿಯ ವಿಭಾಗೀಯ ಪೀಠ ಕೃಷ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಮತ್ತು ಸಿಬಿ-ಸಿಐಡಿ ವಿಚಾರಣೆ ಪ್ರಾರಂಭಿಸಿದ ಕೆಲ ದಿನಗಳಲ್ಲಿ ವಕೀಲರ ಪರಿಷತ್ತು ಈ ಆದೇಶ ಜಾರಿಗೊಳಿಸಿದೆ.
ವಕೀಲ ಕೃಷ್ಣನ್ ಮಹಿಳೆ ಜೊತೆ ಅಪ್ಪುಗೆಯ ಭಂಗಿಯಲ್ಲಿರುವುದು ವೀಡಿಯೊ ಕಾನ್ಫರೆನ್ಸ್ ವೇಳೆ ಬಯಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತಿತರ ಶಿಕ್ಷಾರ್ಹ ಕಾನೂನುಗಳ ಅಡಿಯಲ್ಲಿ ಸಂಜ್ಞೇಯ ಅಪರಾಧ ನಡೆದಿರುವುದನ್ನು ವೀಡಿಯೊ ಮೇಲ್ನೋಟಕ್ಕೆ ಬಹಿರಂಗಪಡಿಸಿರುವುದರಿಂದ ಹೈಕೋರ್ಟ್ ಘಟನೆಯ ಕುರಿತು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದೆ.
ಈ ಸಂಬಂಧ ಡಿಸೆಂಬರ್ 23ರಂದು ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಅದು ಸೂಚಿಸಿದ್ದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.