-->
Conditional permission for AGB- ಚುನಾವಣಾ ನೀತಿ ಸಂಹಿತೆ: ಆದೇಶದಲ್ಲಿ ಮಾರ್ಪಾಟು, ಸಂಘಗಳ ವಾರ್ಷಿಕ ಸಭೆಗೆ ಷರತ್ತುಬದ್ಧ ಅನುಮತಿ

Conditional permission for AGB- ಚುನಾವಣಾ ನೀತಿ ಸಂಹಿತೆ: ಆದೇಶದಲ್ಲಿ ಮಾರ್ಪಾಟು, ಸಂಘಗಳ ವಾರ್ಷಿಕ ಸಭೆಗೆ ಷರತ್ತುಬದ್ಧ ಅನುಮತಿ

ಚುನಾವಣಾ ನೀತಿ ಸಂಹಿತೆ: ಆದೇಶದಲ್ಲಿ ಮಾರ್ಪಾಟು, ಸಂಘಗಳ ವಾರ್ಷಿಕ ಸಭೆಗೆ ಷರತ್ತುಬದ್ಧ ಅನುಮತಿ





ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ವಾರ್ಷಿಕ ಸಭೆ ನಡೆಸುವ ಬಗ್ಗೆ ಡಿಸೆಂಬರ್ 16ರ ತನಕ ವಿಧಿಸಲಾಗಿದ್ದ ನಿರ್ಬಂಧಗಳನ್ನು ಷರತ್ತಿಬದ್ಧವಾಗಿ ಸಡಿಲಿಸಲಾಗಿದೆ.



ಸಹಕಾರ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಯು ನೇರವಾಗಿ ಯಾ ಪರೋಕ್ಷವಾಗಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಹಕಾರ ಇಲಾಖೆ ಈ ನಿರ್ಬಂಧ ವಿಧಿಸಿತ್ತು.



ಆದರೆ, ಸಾರ್ವಜನಿಕ ಅಹವಾಲು ಹಾಗೂ ಮರುಪರಿಶೀಲನಾ ಮನವಿಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಸಚಿವಾಲಯದ ಅನುಮತಿಯೊಂದಿಗೆ ಈ ಆದೇಶವನ್ನು ಷರತ್ತುಬದ್ಧವಾಗಿ ಸಡಿಲಿಸಲು ಸರ್ಕಾರ ನಿರ್ಧರಿಸಿದೆ.



ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಥವಾ ಧಕ್ಕೆ ಆಗದ ರೀತಿಯಲ್ಲಿ ಶಾಸನಬದ್ಧ ಕಾರ್ಯಕ್ರಮದ ಅನುಮೋದನೆಗೆ ಸೀಮಿತಗೊಳಿಸಿ ಸಹಕಾರ ಸಂಘಗಳ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಅನುಮತಿ ನೀಡಲಾಗಿದೆ.



ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಸಾಮಾನ್ಯ ಸಭೆಯಲ್ಲಿ ತಮ್ಮ ಬಜೆಟ್ ಅನುಮೋದನೆ, ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ಸಂಘದ ಶಾಸನಬದ್ಧವಾದ ಕಾರ್ಯಚಟುವಟಿಕೆಗಳ ಚರ್ಚೆಗೆ ಸೀಮಿತಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.



ಇದರ ಜೊತೆಗೆ ಚುನಾವಣಾ ಆಯೋಗ ಹೊರಡಿಸಿರುವ ಮಾದರಿ ನೀತಿ ಸಂಹಿತೆ ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ಸಾಮಾನ್ಯ ಸಭೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ.


ಒಂದು ವೇಳೆ, ಮಾದರಿ ನೀತಿ ಸಂಹಿತೆ ಮಾರ್ಗಸೂಚಿ ಉಲ್ಲಂಘನೆ ಯಾ ಷರತ್ತು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಜನಪ್ರತಿನಿಧಿ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.




Ads on article

Advertise in articles 1

advertising articles 2

Advertise under the article