IBC suspend advocates- SC Upheld the decision- ವಕೀಲರ ನೋಂದಣಿ ರದ್ದುಪಡಿಸಿದ ಭಾರತೀಯ ವಕೀಲರ ಸಂಘ: ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್
ವಕೀಲರ ನೋಂದಣಿ ರದ್ದುಪಡಿಸಿದ ಭಾರತೀಯ ವಕೀಲರ ಸಂಘ: ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್
= ವಕೀಲರ ನೋಂದಣಿ ಸಮಯದಲ್ಲಿ ಕ್ರಿಮಿನಲ್ ಮೊಕದ್ದಮೆಗಳ ರಹಸ್ಯ ಕಾಪಾಡಿದ ವಕೀಲರ ವಿರುದ್ಧ ಕ್ರಮ
= ಇಂಡಿಯನ್ ಬಾರ್ ಕೌನ್ಸಿಲ್ ನಿರ್ಧಾರ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
= ಮದ್ರಾಸ್ ಹೈಕೋರ್ಟ್ ನಿರ್ಧಾರಕ್ಕೆ ಅಂತಿಮ ಮೊಹರು ಹಾಕಿದ ಸುಪ್ರೀಂ
ವಕೀಲರ ಪರಿಷತ್ತಿನಲ್ಲಿ ವಕೀಲರು ತಮ್ಮ ದಾಖಲಾತಿ (enrolment) ಸಮಯದಲ್ಲಿ ವಕೀಲರು ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಮಾಹಿತಿ ನೀಡದೆ ಮುಚ್ಚಿಟ್ಟುಕೊಳ್ಳುತ್ತಾರೆ. ಮತ್ತು ಇಂತಹ ಕಾರಣಕ್ಕೆ ವಕೀಲರ ನೋಂದಣಿಯನ್ನು ರದ್ದು ಮಾಡಿದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ವಕೀಲರ ಪರಿಷತ್ತಿನಲ್ಲಿ ವಕೀಲರು ತಮ್ಮ ದಾಖಲಾತಿ (enrolment) ಸಂದರ್ಭದಲ್ಲಿ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಯ ಅಂಶವನ್ನು ಗೌಪ್ಯವಾಗಿಟ್ಟು ರಹಸ್ಯ ಕಾಪಾಡುವ ವಕೀಲರ ದಾಖಲಾತಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ರದ್ದುಗೊಳಿಸುವ ನಿರ್ಧಾರ ಕೈಗೊಂಡಿತ್ತು.
ಈ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಕೂಡ ಸಮ್ಮತಿ ಸೂಚಿಸಿದ್ದು, ಇದೊಂದು ಸರಿಯಾದ ನಿರ್ಧಾರವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ತಮ್ಮ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳ ಮಾಹಿತಿ ಬಹಿರಂಗಪಡಿಸದ ಕಾರಣ ವಕೀಲರ ಸನದ್ದನ್ನು ರದ್ದುಗೊಳಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿರ್ಧಾರವನ್ನು ಎತ್ತಿಹಿಡಿಯುವ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೊರ್ಟ್ ಮುಂದೆ ಹಾಕಲಾಗಿತ್ತು. ನ್ಯಾಯಮೂರ್ತಿ ಎಂಆರ್ ಶಾ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠವು ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿದೆ.