Pocso Act HC Judgement - ಅಪ್ರಾಪ್ತರಲ್ಲಿ ಮದುವೆ ಪ್ರಸ್ತಾಪ, ಕೈ-ಸ್ಕಾರ್ಫ್ ಎಳೆಯುವುದು ಪೊಕ್ಸೊ ಅಪರಾಧವಲ್ಲ: ಕೊಲ್ಕೊತ್ತಾ ಹೈಕೋರ್ಟ್
ಅಪ್ರಾಪ್ತರಲ್ಲಿ ಮದುವೆ ಪ್ರಸ್ತಾಪ, ಕೈ-ಸ್ಕಾರ್ಫ್ ಎಳೆಯುವುದು ಪೊಕ್ಸೊ ಅಪರಾಧವಲ್ಲ: ಕೊಲ್ಕೊತ್ತಾ ಹೈಕೋರ್ಟ್
ಸ್ಕಾರ್ಫ್ ಎಳೆಯುವುದು, ಕೈ ಎಳೆಯುವುದು ಲೈಂಗಿಕ ದೌರ್ಜನ್ಯವಲ್ಲ... ಹೆಚ್ಚೆಂದರೆ ಭಾರತೀಯ ದಂಡ ಸಂಹಿತೆಯ ಕಲಂ 506 (ಕ್ರಿಮಿನಲ್ ಬೆದರಿಕೆ), 354-A (ಲೈಂಗಿಕ ಕಿರುಕುಳ) ಅಡಿ ಅಪರಾಧವಾಗಬಹುದು.
ಇದು ನ್ಯಾಯಾಲಯ ನೀಡಿದ ತೀರ್ಪು.
ನುರೈ ಎಸ್.ಕೆ. ಆಲಿಯಾಸ್ ನೂರುಲ್ ಎಸ್.ಕೆ. Vs ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದ ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್, ಈ ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿಯ ಸ್ಕಾರ್ಫ್ ಎಳೆಯುವುದು, ಬಾಲಕಿಯ ಕೈ ಎಳೆಯುವುದು ಮತ್ತು ಮದುವೆ ಪ್ರಸ್ತಾಪ ಮಾಡುವುದು ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಹೇಳಲಾಗದು ಎಂದು ಹೇಳಿದೆ.
ಇಂತಹ ಅಪರಾಧಗಳು ಭಾರತೀಯ ದಂಡ ಸಂಹಿತೆಯ ಕಲಂ 506 (ಕ್ರಿಮಿನಲ್ ಬೆದರಿಕೆ), 354-A (ಲೈಂಗಿಕ ಕಿರುಕುಳ) ಅಡಿ ವಿಚಾರಣೆಗೆ ಒಳಪಡುತ್ತವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ವಿಚಾರಣಾ ನ್ಯಾಯಾಲಯದಲ್ಲಿ ಪೊಕ್ಸೊ ಕಾಯ್ದೆ ಸೆಕ್ಷನ್ 8 (ಅಪ್ರಾಪ್ತ ವಯಸ್ಕನ ಲೈಂಗಿಕ ದೌರ್ಜನ್ಯ), ಸೆಕ್ಷನ್ 12 (ಲೈಂಗಿಕ ಕಿರುಕುಳ) ಮತ್ತು ಐಪಿಸಿ ಸೆಕ್ಷನ್ ಕಲಂ 506, 354-A ನಡಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಲಾಗಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಕೊಲ್ಕೊತ್ತಾ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.