SC on POCSO case Veridict- ಸಂತ್ರಸ್ತೆ ರಾಜಿಯಾದರೆ ಪೋಕ್ಸೊ ಪ್ರಕರಣ ರದ್ದು?: ಮಹತ್ವದ ತೀರ್ಪಿಗೆ ಸಜ್ಜಾದ ಸುಪ್ರೀಂ ಕೋರ್ಟ್
ಸಂತ್ರಸ್ತೆ ರಾಜಿಯಾದರೆ ಪೋಕ್ಸೊ ಪ್ರಕರಣ ರದ್ದು?: ಮಹತ್ವದ ತೀರ್ಪಿಗೆ ಸಜ್ಜಾದ ಸುಪ್ರೀಂ ಕೋರ್ಟ್
ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆರೋಪಿ ರಾಜಿ ಆಧರಿಸಿ ಪ್ರಕರಣವನ್ನು ರದ್ದುಪಡಿಸಬೇಕೆ ಎಂಬ ಬಗ್ಗೆ ಮಹತ್ವದ ತೀರ್ಪು ನೀಡಲು ಸುಪ್ರೀಂ ಕೋರ್ಟ್ ಸಜ್ಜಾಗಿದೆ.
(ಕೇರಳ ಸರಕಾರ ಮತ್ತಿತರರು Vs ಹಫ್ಜಲ್ ರೆಹಮಾನ್ ಎನ್.ಕೆ - ಸುಪ್ರೀಂ ಕೋರ್ಟ್)
ಸಂತ್ರಸ್ತೆ ಜೊತೆ ಸೌಹಾರ್ದಯುತ ಒಪ್ಪಂದ ಏರ್ಪಟ್ಟ ಹಿನ್ನಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಿಸಲಾದ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿತ್ತು.
ಈ ವಿವಾದಾತ್ಮಕ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ವಿಶೇಷ ಅನುಮತಿ ಅರ್ಜಿ (ಎಸ್.ಎಲ್.ಪಿ) ಹಾಕಿತ್ತು.
ಶಿಕ್ಷಕ/ಆರೋಪಿ ಹಫ್ಜಲ್ ರೆಹಮಾನ್ ತನ್ನ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆಯ ಕೆನ್ನೆಯನ್ನು ಕೈಗಳಿಂದ ಸ್ಪರ್ಶಿಸಿ ಆಕೆಯ ಹಣೆಗೆ ಕಿಸ್ ನೀಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್ 9 (ಎಫ್) ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿ ಜೊತೆ ಪ್ರಕರಣ ಸೌಹಾರ್ದಯುತವಾಗಿ ಬಗೆಹರಿದಿದೆ, ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ತನ್ನ ಅಭ್ಯಂತರವಿಲ್ಲ ಎಂದು ಹೈಕೋರ್ಟ್ ಗೆ ಸಂತ್ರಸ್ತೆ ಅಫಿಡವಿಟ್ ಸಲ್ಲಿಸಿದ್ದರು. ಇದನ್ನು ಆಧರಿಸಿ ಆರೋಪಿಗಳ ವಿರುದ್ಧ ಪೋಕ್ಸೊ ವಿಚಾರಣೆ ರದ್ದುಗೊಳಿಸಿತ್ತು.
ಆದರೆ, "ಮಧ್ಯಪ್ರದೇಶ ಸರ್ಕಾರ ಮತ್ತು ಲಕ್ಷ್ಮೀ ನಾರಾಯಣ್ ಮತ್ತಿತರರ"ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಹೈಕೋರ್ಟ್ ತೀರ್ಪು ರದ್ದುಗೊಳಿಸಲು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.