Special Reservation in Police Recruitment- ಪೊಲೀಸ್ ಇಲಾಖೆ ಕ್ರಾಂತಿಕಾರಿ ಹೆಜ್ಜೆ- ಮಂಗಳಮುಖಿಯರಿಗೆ ಮೀಸಲಾತಿ
Tuesday, December 21, 2021
ಪೊಲೀಸ್ ಇಲಾಖೆ ಕ್ರಾಂತಿಕಾರಿ ಹೆಜ್ಜೆ- ಮಂಗಳಮುಖಿಯರಿಗೆ ಮೀಸಲಾತಿ
ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರಕಾರಗಳು ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರಿಗೆ ಮೀಸಲಾತಿ ಕಲ್ಪಿಸಿದೆ.
ಸಮಾಜದ ಮುಖ್ಯವಾಹಿನಿಯಲ್ಲಿ ಮಂಗಳಮುಖಿಯರೂ ಪಾಲ್ಗೊಳ್ಳಬೇಕು ಎಂಬ ಸದಾಶಯದೊಂದಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಶೇಕಡಾ ಒಂದರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.
ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್ಆರ್ಪಿ) ನೇಮಕಾತಿಯಲ್ಲಿ ಮಂಗಳಮುಖಿಯರ ನೇಮಕಕ್ಕೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಇದೇ ಮೊದಲ ಬಾರಿಗೆ ಇಂತಹ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಶೇಕಡ ಒಂದರ ಮೀಸಲಾತಿಯಲ್ಲಿ ಪೊಲೀಸ್ ಇಲಾಖೆಗಳಲ್ಲಿನ ನೇಮಕಾತಿಗಳಲ್ಲಿ ಮಂಗಳಮುಖಿಯರು ಭಾಗವಹಿಸಬಹುದಾಗಿದೆ.