-->
revised pecuniary jurisdiction of Consumer commission- ಜಿಲ್ಲಾ ಗ್ರಾಹಕರ ನ್ಯಾಯಾಲಯದ ಹಣಕಾಸು ವ್ಯಾಪ್ತಿ ಪರಿಷ್ಕರಣೆ: ಕೇಂದ್ರ

revised pecuniary jurisdiction of Consumer commission- ಜಿಲ್ಲಾ ಗ್ರಾಹಕರ ನ್ಯಾಯಾಲಯದ ಹಣಕಾಸು ವ್ಯಾಪ್ತಿ ಪರಿಷ್ಕರಣೆ: ಕೇಂದ್ರ

ಜಿಲ್ಲಾ ಗ್ರಾಹಕರ ನ್ಯಾಯಾಲಯದ ಹಣಕಾಸು ವ್ಯಾಪ್ತಿ ಪರಿಷ್ಕರಣೆ: ಕೇಂದ್ರ






ಕೇಂದ್ರ ಸರ್ಕಾರವು ಗ್ರಾಹಕ ನ್ಯಾಯಾಲಯದ ಪೆಕ್ಯೂನಿಯರಿ ಜ್ಯೂರಿಸ್ಡಿಕ್ಷನ್ (ಹಣಕಾಸು ವ್ಯಾಪ್ತಿ)ಯನ್ನು ಪರಿಷ್ಕರಿಸಿದೆ.



ಇನ್ನು ಮುಂದೆ ಜಿಲ್ಲಾ ಗ್ರಾಹಕ ವಿವಾದಗಳ ಆಯೋಗವು 50 ಲಕ್ಷ ರೂ. ವರೆಗಿನ ಪರಿಹಾರ ಮೊತ್ತದ ದೂರುಗಳನ್ನು ಮಾತ್ರ ಇತ್ಯರ್ಥಪಡಿಸುವ ಅಧಿಕಾರ ಹೊಂದಿದೆ. ಇಲ್ಲಿಯವರೆಗೆ, ಜಿಲ್ಲಾ ಗ್ರಾಹಕ ನ್ಯಾಯಾಲಯದ ಅರ್ಥಿಕ ವ್ಯಾಪ್ತಿ ಒಂದು ಕೋಟಿ. ರೂ. ಆಗಿತ್ತು.



ಈ ಬಗ್ಗೆ ಕೇಂದ್ರ ಸರ್ಕಾರವು ಗ್ರಾಹಕರ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದೇ ರೀತಿ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಗಳ ಹಣಕಾಸು ವ್ಯಾಪ್ತಿಯನ್ನೂ ಪರಿಷ್ಕರಿಸಲಾಗಿದೆ.



ಹೊಸ/ಪರಿಷ್ಕೃತ ನಿಯಮಗಳ ಪ್ರಕಾರ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸಲಿದೆ.



ಗ್ರಾಹಕರ ರಕ್ಷಣೆ (ಜಿಲ್ಲಾ ಆಯೋಗ, ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗ) ನಿಯಮಗಳು- 2021ಕ್ಕೆ ಸಂಬಂಧಿಸಿದಂತೆ ಕೇಂದ್ರ ಅಧಿಸೂಚನೆ ಹೊರಡಿಸಿ ಹಣಕಾಸು ವ್ಯಾಪ್ತಿಯನ್ನು ಪರಿಷ್ಕರಿಸಲಾಗಿದೆ.


ಗ್ರಾಹಕರ ಕಾಯಿದೆಯ ಕಲಂ 34, 47, 58 ಹಾಗೂ 101 ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಜಾರಿಗೆ ಮಾಡುವ ಸಂಬಂಧ ನಿಯಮಾವಳಿ ಬದಲಾವಣೆ ಮಾಡಲಾಗಿದೆ.





ಹೊಸ ನಿಯಮಗಳ ಪ್ರಕಾರ ಪರಿಷ್ಕೃತ ಹಣಕಾಸು ವ್ಯಾಪ್ತಿ ಈ ಕೆಳಗಿನಂತಿದೆ.


1. ಜಿಲ್ಲಾ ಗ್ರಾಹಕ ನ್ಯಾಯಾಲಯದ ಹಣಕಾಸು ವ್ಯಾಪ್ತಿ: ರೂ. 50 ಲಕ್ಷ ಮೊತ್ತ ಮೀರದ ದೂರುಗಳ ವಿಚಾರಣೆ ಅಧಿಕಾರ.


2. ರಾಜ್ಯ ಗ್ರಾಹಕ ನ್ಯಾಯಾಲಯದ ಹಣಕಾಸು ವ್ಯಾಪ್ತಿ: ರೂ. 50 ಲಕ್ಷಕ್ಕಿಂತ ಅಧಿಕ ಹಾಗೂ ರೂ. 2 ಕೋಟಿ ಮೊತ್ತದ ಪರಿಹಾರ ಮೀರದ ದೂರುಗಳ ವಿಚಾರಣೆ ಅಧಿಕಾರ.


3. ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಹಣಕಾಸು ವ್ಯಾಪ್ತಿ: ರೂ. 2 ಕೋಟಿ ಮೊತ್ತದ ಪರಿಹಾರ ಮೀರಿದ ಮೊತ್ತದ ದೂರುಗಳ ವಿಚಾರಣೆ ಅಧಿಕಾರ.





ಈ ಹಿಂದೆ, ಜಿಲ್ಲಾ ಆಯೋಗಗಳು 1 ಕೋಟಿ ರೂ. ಮೀರದ ದೂರುಗಳನ್ನು ಅಂಗೀಕರಿಸುವ ಅಧಿಕಾರ ವ್ಯಾಪ್ತಿ ಇತ್ತು. ರಾಜ್ಯ ಆಯೋಗಗಳಿಗೆ - 1 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಹಾಗೂ 10 ಕೋಟಿ ರೂ. ಮೌಲ್ಯ ಮೀರದ ದೂರುಗಳ ವಿಚಾರಣೆಯ ಅಧಿಕಾರ ವ್ಯಾಪ್ತಿ ಇತ್ತು.


 ರಾಷ್ಟ್ರೀಯ ಆಯೋಗಕ್ಕೆ 10 ಕೋಟಿ ರೂ. ಮೌಲ್ಯ ಹೆಚ್ಚಿನ ಮೊತ್ತದ ದೂರುಗಳ ವಿಚಾರಣೆ ನಡೆಸುವ ಹಣಕಾಸು ವ್ಯಾಪ್ತಿ ಹೊಂದಿತ್ತು. 

Ads on article

Advertise in articles 1

advertising articles 2

Advertise under the article