-->
Delhi HC -  ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆ ಸಲ್ಲಿಕೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

Delhi HC - ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆ ಸಲ್ಲಿಕೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆ ಸಲ್ಲಿಕೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು






ಜಿಂದಾಲ್ ಸ್ಟೇನ್‌ಲೆಸ್ (ಹಿಸಾರ್) ಲಿಮಿಟೆಡ್ ವಿರುದ್ಧ ಸೌರಭ್ ಜಿನಾಲ್ ಮತ್ತು ಓಆರ್‌ಎಸ್‌ನಲ್ಲಿ ಪ್ರತಿವಾದಿಗಳಿಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಿದ ನಂತರ ಕೆಲವು ಹೆಚ್ಚುವರಿ ದಾಖಲೆಗಳನ್ನು ದಾಖಲಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.



JINDAL STAINLESS (HISAR) LTD vs SOURABH JINAL & ORS (Delhi HC)



ನ್ಯಾ. ಸುರೇಶ್ ಕುಮಾರ್ ಕೈಟ್ ಅವರನ್ನೊಳಗೊಂಡ ಏಕಸದಸ್ಯ ಪೀಠವು ಈ ಅನುಮತಿ ನೀಡಿದ್ದು, ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಹಲವು ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದೆ.



"ಜಿಂದಾಲ್" ಟ್ರೇಡ್‌ಮಾರ್ಕ್ ಉಲ್ಲಂಘನೆ ವಿರುದ್ಧ ಶಾಶ್ವತ ತಡೆಯಾಜ್ಞೆ, ಟ್ರೇಡ್‌ಮಾರ್ಕ್ ಬಳಕೆ ನಿರ್ಬಂಧಿಸುವುದು, ಅದನ್ನು ದುರ್ಬಲಗೊಳಿಸುವುದು ಮತ್ತು ಕಳಂಕಗೊಳಿಸುವಿಕೆ ವಿರುದ್ಧ ಜಿಂದಾಲ್ ಮೊಕದ್ದಮೆ ಹೂಡಿತ್ತು.



ಲಿಖಿತ ಹೇಳಿಕೆಯನ್ನು ಸಲ್ಲಿಸಿದ ನಂತರ ಕೆಲವು ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯದ ಮುಂದಿಡಲು ಅರ್ಜಿದಾರರು/ಪ್ರತಿವಾದಿಗಳ ಪರ ವಕೀಲರು ಬಯಸಿದ್ದು, ಈ ದಾಖಲೆಗಳು ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿ ಇದೆ ಮತ್ತು ಈ ಪ್ರಕರಣದ ನ್ಯಾಯ ನಿರ್ಣಯಕ್ಕೆ ಅತಿ ಅಗತ್ಯ ಎಂದು ವಾದಿಸಿದರು.


ಆದರೆ, ಅವರ ವಾದಕ್ಕೆ ವಾದಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹಾಜರುಪಡಿಸಲು ಬಯಸಿದ ದಾಖಲೆಗಳು ಪ್ರತಿವಾದಿಗಳ ಕೈಯಲ್ಲಿ ಇದ್ದು, ಲಿಖಿತ ಹೇಳಿಕೆ ಸಲ್ಲಿಸುವ ಮುನ್ನವೇ ಟ್ರೇಡ್ ಮಾರ್ಕ್ ನೋಂದಣಿ ಮಾಡುವ ಪ್ರಕ್ರಿಯೆಗೆ ಪ್ರಯತ್ನ ಮಾಡುತ್ತಿರಬಹುದು ಎಂದು ಹೇಳಿದರು. 



ಸದರಿ ಪ್ರತಿವಾದಿಯು ಹಾಜರುಪಡಿಸಲು ಕೋರಿರುವ ದಾಖಲೆಗಳನ್ನು ಬಹಿರಂಗಪಡಿಸದಿರಲು ಯಾವುದೇ ಸಮಂಜಸವಾದ ಕಾರಣವನ್ನು ನೀಡಿಲ್ಲ ಎಂದು ಅವರು ವಾದಿಸಿದರು.



ವಿಚಾರಣೆಯ ಈ ಹಂತದಲ್ಲಿ ಹೆಚ್ಚುವರಿ ದಾಖಲೆಗಳನ್ನು ಕಡತಕ್ಕೆ ತೆಗೆದುಕೊಳ್ಳಲು ನ್ಯಾಯಾಲಯದ ಅನುಮತಿ ನೀಡುವ ಮೊದಲು, ದಾಖಲೆಗಳನ್ನು ಸಲ್ಲಿಸಲು ಬಯಸುವ ಪಕ್ಷವು ಸದರಿ ದಾಖಲೆಗಳು ತಮ್ಮ ಪರಿಜ್ಞಾನದಲ್ಲಿ ಇರಲಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕು ಎಂದು ಅವರು ಹೇಳಿದರು.



Polyflor Limited Vs. Sh. A.N. Goenka & Ors ಮತ್ತು Dewanti Devi and Others Vs. Radheshyam Tiwary and Others ಪ್ರಕರಣದ ನ್ಯಾಯತೀರ್ಮಾನವನ್ನು ಉಲ್ಲೇಖಿಸಿದ ವಾದಿ ಪರ ವಕೀಲರು, Order VIII Rule 1A(3) ಅಡಿಯಲ್ಲಿ ಲಿಖಿತ ಹೇಳಿಕೆಯೊಂದಿಗೆ ಹಾಜರುಪಡಿಸದ ದಾಖಲೆಗಳನ್ನು ನ್ಯಾಯಾಲಯದ ಅನುಮತಿಯಿಲ್ಲದೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಿಲ್ಲ ಎಂದು ವಾದಿಸಿದರು.



ಹಂತ ಮೀರಿದ ಸಂದರ್ಭದಲ್ಲಿ ದಾಖಲಾತಿ ಸಲ್ಲಿಕೆಗೆ ಸಂಬಂಧಿಸಿದಂತೆ ವಾದಿ ಪರ ವಕೀಲರು Nitin Gupta Vs. Texmaco Infrastructure & Holding Limited ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು.



ಸುಪ್ರೀಂ ಕೋರ್ಟ್‌ನ Sugandhi (Supra) ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆ ಸಲ್ಲಿಕೆಗೆ ಪ್ರತಿವಾದಿಗೆ ಅನುಮತಿ ನೀಡಿತು.



JINDAL STAINLESS (HISAR) LTD vs SOURABH JINAL & ORS (Delhi HC)


https://www.latestlaws.com/latest-caselaw/2020/october/2020-latest-caselaw-556-sc/










Ads on article

Advertise in articles 1

advertising articles 2

Advertise under the article