-->
Evidence as per SOP- ಸೋಮವಾರದಿಂದ ರಾಜ್ಯದ ನ್ಯಾಯಾಲಯಗಳಲ್ಲಿ ಸಾಕ್ಷ್ಯ ವಿಚಾರಣೆ ಇದೆಯೇ..?- ಹೈಕೋರ್ಟ್ SOP ಏನು ಹೇಳುತ್ತದೆ?

Evidence as per SOP- ಸೋಮವಾರದಿಂದ ರಾಜ್ಯದ ನ್ಯಾಯಾಲಯಗಳಲ್ಲಿ ಸಾಕ್ಷ್ಯ ವಿಚಾರಣೆ ಇದೆಯೇ..?- ಹೈಕೋರ್ಟ್ SOP ಏನು ಹೇಳುತ್ತದೆ?

ಸೋಮವಾರದಿಂದ ರಾಜ್ಯದ ನ್ಯಾಯಾಲಯಗಳಲ್ಲಿ ಸಾಕ್ಷ್ಯ ವಿಚಾರಣೆ ಇದೆಯೇ..?- ಹೈಕೋರ್ಟ್ SOP ಏನು ಹೇಳುತ್ತದೆ?





ಕರ್ನಾಟಕ ಹೈಕೋರ್ಟ್ ರಾಜ್ಯದ ವಿವಿಧ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಕಲಾಪ ಕುರಿತಂತೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಕಲಾಪಗಳು ಹೇಗೆ ಇರಲಿವೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ವಕೀಲ ಸಮುದಾಯದಲ್ಲಿ ಎದುರಾಗಿದೆ.



ಈಗಾಗಲೇ ಎರಡು ವರ್ಷದ ಲಾಕ್ ಸಂಕಷ್ಟದಿಂದ ತೊಂದರೆಗೆ ಒಳಗಾಗಿರುವ ವಕೀಲ ಸಮುದಾಯ ಇದೀಗ ಮೂರನೇ ಸಂಕಷ್ಟಕ್ಕೆ ಗುರಿಯಾಗಿದೆ.



ನಾಳೆಯಿಂದ ಸಾಕ್ಷ್ಯ ವಿಚಾರಣೆ ಬಗ್ಗೆ SOPಯಲ್ಲಿ ಹೀಗೆ ಹೇಳಲಾಗಿದೆ.


ಅಧಿಸೂಚನೆಯ 19ನೇ ಪ್ಯಾರಾದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳು ವಿಚಾರಣೆ ಪೂರ್ಣಗೊಳಿಸಿದ ಮತ್ತು ಕಾಯ್ದಿರಿಸಲಾದ ಪ್ರಕರಣಗಳ ತೀರ್ಪನ್ನು ಪ್ರಕಟಿಸಬಹುದಾಗಿದೆ.



ಇದೇ ಅಧಿಸೂಚನೆಯ 18ನೇ ಪ್ಯಾರಾದಲ್ಲಿ, ಎಲ್ಲಾ ಪ್ರಕರಣಗಳ ಸಾಕ್ಷ್ಯ ವಿಚಾರಣೆಯನ್ನು ಸದ್ಯದ ಮಟ್ಟಿಗೆ ಮುಂದೂಡಬಹುದು ಎಂದು ಹೇಳಲಾಗಿದೆ. ಆದರೆ, ಕಾಲಮಿತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಗದಿಪಡಿಸಿದ ಪ್ರಕರಣಗಳನ್ನು ಇದರಿಂದ ಹೊರತು ಪಡಿಸಲಾಗಿದೆ.



ಅಂದರೆ, ಕಾಲಮಿತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕಾದ ಪ್ರಕರಣಗಳಿಗೆ ಮಾತ್ರ ಸಾಕ್ಷ್ಯ ವಿಚಾರಣೆ ನಡೆಯಲಿದೆ. ಅದಕ್ಕೂ ಪೂರ್ವಾನುಮತಿ ಮೂಲಕ.



ಇದೇ ಅಧಿಸೂಚನೆಯ 20ನೇ ಪ್ಯಾರಾದಲ್ಲಿ, CrPC ಕಲಂ 164 ಅಡಿಯಲ್ಲಿ ಮಾಡಲಾಗುವ '164 ಹೇಳಿಕೆ'ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಗಳು ದಾಖಲಿಸಲು ಅನುಮತಿ ನೀಡಲಾಗಿದೆ. 


ಇದಕ್ಕೆ ಅನುಮತಿ ಬಯಸಿ ವಕೀಲರು ಸಲ್ಲಿಸಬೇಕಾದ ಅರ್ಜಿಗಳನ್ನು ಇಮೇಲ್ ಮೂಲಕವೇ ಸಲ್ಲಿಸಬಹುದಾಗಿದೆ. ಈ ಅರ್ಜಿ ಕುರಿತ ಆದೇಶಗಳ ಮಾಹಿತಿಯನ್ನು ಎಸ್ಎಂಎಸ್ ಅಥವಾ ಈಮೇಲ್ ಮೂಲಕ ನ್ಯಾಯಾಲಯಗಳು ನೀಡಲಿವೆ.



ತುರ್ತು ಅಗತ್ಯದ ಸಂದರ್ಭದಲ್ಲಿ ಮಾತ್ರ, ಪ್ರಕರಣದಲ್ಲಿ ವಾದ ಮಂಡಿಸುವ ವಕೀಲರು ಆ ಪ್ರಕರಣದ ಹಂತ ಮತ್ತು ಅಗತ್ಯದ ಬಗ್ಗೆ ಮಾಹಿತಿಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಸಲ್ಲಿಸಿ ವಾದ ಮಂಡನೆಗೆ(ಹಿಯರಿಂಗ್) ಅನುಮತಿ ಕೋರಿ ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ



ನ್ಯಾಯಾಲಯಗಳ ದೃಢೀಕೃತ ನಕಲುಗಳು, ಆದೇಶದ ಪ್ರತಿ ಸೇರಿದಂತೆ ನಕಲು ಪ್ರತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಆಯಾ ನ್ಯಾಯಾಲಯದಲ್ಲಿ ವಿಲೇವಾರಿ ಮಾಡಲು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ವ್ಯವಸ್ಥೆ ಮಾಡುತ್ತಾರೆ ಎಂದು ಅಧಿಸೂಚನೆ ಮಾಹಿತಿ ನೀಡಿದೆ.



ಹೈಕೋರ್ಟ್ ಅಧಿಸೂಚನೆಯ ಪೂರ್ಣ ಮಾಹಿತಿ ಇಲ್ಲಿದೆ

https://www.courtbeatnews.com/2022/01/new-sop-krk-hc.html


Ads on article

Advertise in articles 1

advertising articles 2

Advertise under the article