DNA test without permission, not a fundamental right- DNA ಪರೀಕ್ಷೆ ಮೂಲಭೂತ ಹಕ್ಕಿನ ಉಲ್ಲಂಘನೆಯೇ..?: ಅತ್ಯಾಚಾರಿಯ ಅರ್ಜಿಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..?
DNA ಪರೀಕ್ಷೆ ಮೂಲಭೂತ ಹಕ್ಕಿನ ಉಲ್ಲಂಘನೆಯೇ..?: ಅತ್ಯಾಚಾರಿಯ ಅರ್ಜಿಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..?
ಡಿಎನ್‌ಎ ಪರೀಕ್ಷೆಗೆ ಅತ್ಯಾಚಾರ ಆರೋಪಿಯ ರಕ್ತದ ಮಾದರಿ ಪಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ ಎಂದ ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಆರೋಪಿಯ ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹಿಸಿರುವ ಕ್ರಮ ಆತನ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ ಎಂದ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಬಗ್ಗೆ ಆರೋಪಿಯ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್ ಈ ತೀರ್ಪು ನೀಡಿದ್ದು, ಆರೋಪಿಯ ಅರ್ಜಿಯನ್ನು ವಜಾಗೊಳಿಸಿದೆ.
DNA ಪರೀಕ್ಷೆಗೆ ಬಲವಂತವಾಗಿ ರಕ್ತದ ಮಾದರಿಯನ್ನು ಪಡೆಯಲಾಗಿದೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿ ವಾದ ಮಂಡಿಸಿದ್ದ.
ಸಂತ್ರಸ್ತೆಯನ್ನು ಕೂಲಿ ಕೆಲಸಕ್ಕೆ ಎಂದು ಪುಸಲಾಯಿಸಿ ಕರೆದೊಯ್ದಿದ್ದ ಆರೋಪಿ ಮಾಳಪ್ಪ ಅಲಿಯಾಸ್ ಮಾಲಿಂಗರಾಯ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆ ಬಲವಂತವಾಗಿ ಸಂಭೋಗ ನಡೆಸಿದ್ದ. ಪರಿಣಾಮವಾಗಿ, ಆಕೆ ಬಸುರಿಯಾಗಿದ್ದು, ಬಳಿಕ ಆಕೆಯನ್ನು ವರಿಸಲು ನಿರಾಕರಿಸಿದ್ದ.
ಆಕ್ಷೇಪಿಸಿ ಅತ್ಯಾಚಾರ ಪ್ರಕರಣದ ಆರೋಪಿ ಮಾಳಪ್ಪ ಅಲಿಯಾಸ್ ಮಾಲಿಂಗರಾಯ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ ಅವರಿದ್ಧ ಪೀಠ ಈ ಆದೇಶ ಮಾಡಿದೆ. ಜತೆಗೆ, ಡಿಎನ್ಎ ಪರೀಕ್ಷೆಗೆ ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶನವನ್ನು ಎತ್ತಿಹಿಡಿದಿದೆ.
ಅತ್ಯಾಚಾರ ಆರೋಪಿ ಮಾಳಪ್ಪ ತನ್ನನ್ನು ಸಂಪೂರ್ಣ ಮುಗ್ಧ ಎಂದು ಹೇಳಿಕೊಂಡಿದ್ದ. ಅಲ್ಲದೆ, ಅತ್ಯಾಚಾರ ಮಾಡಿದ್ದಕ್ಕೆ ಯಾವ ಸಾಕ್ಷಿ ಇದೆ ಎಂದು ಕೇಳಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ಟ್ರಯಲ್ ಕೋರ್ಟ್, ಆರೋಪಿಗೆ DNA ಪರೀಕ್ಷೆಗೆ ತಿಳುವಳಿಕೆ ನೀಡಿ ರಕ್ತದ ಮಾದರಿ ಸಂಗ್ರಹಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅತ್ಯಾಚಾರದ ಪರಿಣಾಮ ಮಗು ಜನಿಸಿದೆ ಎನ್ನಲಾಗಿದ್ದು, ಅದರ ದೇಹದಿಂದ ಸಂಗ್ರಹಿಸಿದ ಮಾದರಿ ಹಾಗೂ ಆರೋಪಿ ರಕ್ತದ ಮಾದರಿಯಲ್ಲಿ ಡಿಎನ್ಎ ಸಾಮ್ಯತೆ ಇದೆ. ಈ ವರದಿಯನ್ನು ಆರೋಪಿ 4 ವರ್ಷಗಳ ಬಳಿಕ ಡಿಎನ್ಎ ಪರೀಕ್ಷೆಗೆ ರಕ್ತ ಸಂಗ್ರಹಿಸಲು ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ.
ವಂಶವಾಹಿ (DNA) ಪರೀಕ್ಷೆಗಾಗಿ ಅತ್ಯಾಚಾರ ಆರೋಪಿಯ ರಕ್ತದ ಮಾದರಿ ಪಡೆಯುವುದು ಸಂವಿಧಾನದ 20 (3)ನೇ ವಿಧಿ ಅಡಿ ಸ್ವಯಂ ದೋಷಾರೋಪಣೆಯ ವಿರುದ್ಧದ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಅಭಿಪ್ರಾಯಪಟ್ಟಿದೆ.
ಮಗುವಿನ ಪಿತೃತ್ವ ನಿರ್ಧರಿಸಲು ಮ್ಯಾಜಿಸ್ಟ್ರೇಟ್ ಆದೇಶಿಸಿದ್ದನ್ನು 4 ವರ್ಷಗಳ ಬಳಿಕ ಪ್ರಶ್ನಿಸಿ ಮಲ್ಲಪ್ಪ ಅಲಿಯಾಸ್ ಮಾಲಿಂಗರಾಯ ಸಲ್ಲಿಸಿದ್ದ.