-->
Hijab in School Issue- ಹಿಜಬ್ ಧರಿಸಲು ಅನುಮತಿ ಕೊಡಿ- ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

Hijab in School Issue- ಹಿಜಬ್ ಧರಿಸಲು ಅನುಮತಿ ಕೊಡಿ- ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

ಹಿಜಬ್ ಧರಿಸಲು ಅನುಮತಿ ಕೊಡಿ- ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ





ಧಾರ್ಮಿಕ ವಸ್ರ್ರ ಸಂಹಿತೆಯಾದ ಹಿಜಬ್ ಧರಿಸಿಕೊಂಡು ಕಾಲೇಜಿಗೆ ಬರಲು ಮತ್ತು ತರಗತಿಗೆ ಹಾಜರಾಗಲು ಅನುಮತಿ ನೀಡಿ ಎಂದು ಉಡುಪಿ ವಿದ್ಯಾರ್ಥಿನಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.




ಹಿಜಬ್ ಧರಿಸಲು ಅವಕಾಶ ನೀಡದ ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ರೇಷಮ್ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.




ಸಂವಿಧಾನದ ಕಲಂ 14 ಹಾಗೂ 25ರ ಅಡಿ ಹಿಜಾಬ್ ಧರಿಸುವುದು ತನ್ನ ಮೂಲಭೂತ ಹಕ್ಕೆಂದು ಘೋಷಿಸಬೇಕು ಎಂದು ಅವರು ರಿಟ್‌ನಲ್ಲಿ ಮನವಿ ಮಾಡಿದ್ದಾರೆ.



ಘಟನೆಯ ವಿವರ:

ಕೆಲ ಮುಸ್ಲಿಂ ವಿದ್ಯಾರ್ಥಿನಿಯರು 2021ರ ಡಿಸೆಂಬರ್ 28ರಂದು ಹಿಜಬ್ ಧರಿಸಿ ಕಾಲೇಜಿಗೆ ಹೋಗಿದ್ದರು. ಆಗ ಕಾಲೇಜಿಗೆ ಹಿಜಬ್ ಧರಿಸಿ ಬರುವಂತಿಲ್ಲ. ಹಿಜಾಬ್ ಧರಿಸುವುದು ಡ್ರೆಸ್ ಕೋಡ್ ಉಲ್ಲಂಘಿಸಿದಂತೆ ಎಂದು ಕಾಲೇಜ್ ಆಡಳಿತ ಹೇಳಿತ್ತು. ಕಾಲೇಜಿಗೆ ಹಿಜಬ್ ಧರಿಸಿ ಹಾಜರಾಗುವುದನ್ನು ನಿರ್ಬಂಧಿಸಿರುವ ಕಾಲೇಜಿನ ಕ್ರಮ ಕಾನೂನು ಬಾಹಿರ ಮತ್ತು ತಾರತಮ್ಯದಿಂದ ಕೂಡಿದೆ ಎಂದು ವಿದ್ಯಾರ್ಥಿನಿ ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.




ಹಿಜಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗ. ಧಾರ್ಮಿಕ ಹಕ್ಕಿನ ಆಚರಣೆ ವೇಳೆ ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡಬಹುದಷ್ಟೇ. ಇಂತಹ ಯಾವ ಸಮಸ್ಯೆಯೂ ಹಿಜಾಬ್ ಧರಿಸುವ ವಿಷಯದಲ್ಲಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.




ಕಾಲೇಜಿನಿಂದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಹೊರಗಿಡುವ ಮೂಲಕ ಪ್ರತ್ಯೇಕಿಸಲಾಗಿದೆ. ಹಾಗಾಗಿ, ಇದು ವಿದ್ಯಾರ್ಥಿಗಳ ಮಾನಸಿಕ ಹಾಗೂ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಧರ್ಮದ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕುಗಳನ್ನು ಮೊಕಟುಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.




ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯವನ್ನು ಸಂವಿಧಾನದ ಕಲಂ 25 ಹಾಗೂ 26 

ಪ್ರತಿಯೊಬ್ಬರಿಗೂ ನೀಡಿದೆ. ಹಿಜಬ್ ಧಾರಣೆ ಇಸ್ಲಾಮಿನ ಅವಿಭಾಜ್ಯ ಆಚರಣೆ. ಕುರಾನ್ ನಲ್ಲೂ ಹಿಜಾಬ್ ಧರಿಸುವ ಅಭ್ಯಾಸವನ್ನು ತೆಗೆದುಹಾಕಿದರೆ ಧರ್ಮದ ಮೂಲ ಸ್ವರೂಪದಲ್ಲಿ ಬದಲಾವಣೆ ಆಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ, ಹಿಜಬ್ ಧರಿಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಧ್ಯಪ್ರವೇಶ ಮಾಡಬಾರದು ಎಂಬ ಸೂಕ್ತ ಆದೇಶ ಹೊರಡಿಸುವಂತೆ ಕೋರಲಾಗಿದೆ. 




Ads on article

Advertise in articles 1

advertising articles 2

Advertise under the article